ಮಾಲಾಧೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ.

0
156

ಬಳ್ಳಾರಿ / ಹೊಸಪೇಟೆ:ಶ್ರಾವಣಮಾಸದ ನಿಮಿತ್ತವಾಗಿ ಆರಂಭವಾದ ಐತಿಹಾಸಿಕ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಮಾಲಾಧೀಕ್ಷೆ ಕಾರ್ಯಕ್ರಮಕ್ಕೆ ಹಂಪಿಯ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಭಾರತಿ ಶ್ರೀಗಳು  ಚಾಲನೆ ನೀಡಿದರು.

ವಿದ್ಯಾರಣ್ಯ ಮಠದಲ್ಲಿಶ್ರೀಗಳು, ಭಕ್ತರಿಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಮಾಲಾಧೀಕ್ಷೆ ನೀಡಿ, ಆರ್ಶಿವಚನ ನೀಡಿದರು. ಹಂಪಿ, ಕಡ್ಡಿರಾಂಪುರ, ಕಮಲಾಪುರ, ವೆಂಕಟಾಪುರ ಹಾಗೂ ಬುಕ್ಕಸಾಗರ ಸೇರಿದಂತೆ ಇತರೆ ಗ್ರಾಮಗಳ ಭಕ್ತರು, ಮಾಲಾಧೀಕೆ ಸ್ವೀಕರಿದರು.

ಶ್ರಾವಣಮಾಸದ ಒಂದು ತಿಂಗಳು ಕಾಲ ವ್ರತಾರ್ಚಣೆ ಕೈಗೊಳ್ಳುವ ಮಾಲಾಧಾರಿಗಳು, ಮುಂದಿನ ಅಮಾವಾಸ್ಯೆ ವರಗೆ ಧೀಕ್ಷೆಯಲ್ಲಿರುತ್ತಾರೆ. ಈ ವೇಳೆಯಲ್ಲಿ ವಿದ್ಯಾರಣ್ಯ ಮಠದಲ್ಲಿಯೇ ವಾಸ್ತವ್ಯ ಹೂಡಿ, ಪ್ರತಿದಿನ ಬೆಳಗಿನ ಜಾವದಲ್ಲಿ ಎದ್ದು, ಮುಂಜಾನೆ ಹಾಗೂ ಸಂಜೆ ಕಾಲದಲ್ಲಿ ಸ್ನಾನ, ಪೂಜೆ ಕಾರ್ಯ ಮುಗಿಸಿಕೊಂಡು, ತಮ್ಮ ದೈನಂದಿನ ಕಾಯಕದಲ್ಲಿ ನಿರತರಾಗುತ್ತಾರೆ.

LEAVE A REPLY

Please enter your comment!
Please enter your name here