ವಿಗ್ರಹ ಪ್ರತಿಷ್ಠಾನ ಕಾರ್ಯಕ್ರಮ..

0
249

ಬಳ್ಳಾರಿ: ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ-ಪೂಜ್ಯ ಕಲ್ಯಾಣಶ್ರೀಗಳು ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಉಪಸ್ಥಿತಿ-ಪಂಢರಪುರದ ಶರದ್ ಸ್ವಾಮಿ, ಮಾತಾ ಅನುರಾಧಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ

ಬಳ್ಳಾರಿಯ ಮುಂಡ್ಲೂರು ರಾಜೇಶ್ವರಿ ನಗರದಲ್ಲಿ ಇಂದು ಶ್ರೀ ರುಕ್ಮಿಣಿ ಪಾಂಡುರಂಗ ನೂತನ ಮಂದಿರದಲ್ಲಿ ದೇವತಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಜರುಗಿತು.
ಪಂಢರಪುರದ ಶರದ್ ಸ್ವಾಮಿ ಲಾಖೆ ಮಾತೃಶ್ರೀ ಅನುರಾಧಾ ನೇತೃತ್ವದಲ್ಲಿ ಪೂಜ್ಯ ಕಮ್ಮರಚೇಡು ಮಠದ ಕಲ್ಯಾಣಶ್ರೀಗಳು ಕಾರ್ಯಕ್ರಮ ನೆರವೇರಿಸಿಕೊಟ್ಟರು. ಮಹಾರಾಷ್ಟ್ರ
ಶ್ರೀ ಕ್ಷೇತ್ರ ಪೈಠಣದ ಕಿಶೋರ್ ಜಿ ಭಗವತಾಚಾರ್ಯ ಜೋಷಿ ಅವರು ಸಕಲ ಶಾಸ್ತ್ರಸಮ್ಮತವಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಿಕೊಟ್ಟರು.
ಮಾಜಿ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಎಂ.ಗೋವಿಂದರಾಜುಲು, ವೆಂಕಟರಾವ್ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಂತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

LEAVE A REPLY

Please enter your comment!
Please enter your name here