ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಭೆ..

0
141

ಬೆಂಗಳೂರು/ಕೆ.ಆರ್.ಪುರ:ಧರ್ಮ, ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತಿ ಸಮಾಜವನ್ನು ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಮಹದೇವಪುರ ಕ್ಷೇತ್ರದ ಎಇಸಿಎಸ್ ಬಡಾವಣೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಹಿರಿಯ ಚಿಂತಕರು ಸಮಾಜವನ್ನು ಜಾತಿ, ಧರ್ಮಗಳ ಬೇಧದಿಂದ ದೂರಾಗಿಸಿ ಒಗ್ಗುಡಿಸುವ ಕಾರ್ಯಮಾಡಿದ್ದರೆ, ಬಸವೇಶ್ವರ, ಕನಕದಾಸರ, ಅಂಬೇಡ್ಕರರ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಧರ್ಮ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ತನ್ನ ಆಡಳಿತದಲ್ಲಿನ ಹುಳುಕು ಮುಚ್ಚಿಕೊಳ್ಳಲು, ಜಾತಿ, ಧರ್ಮಗಳ ನಡುವೆ ಒಡಕು ಮೂಡುವಂತೆ ಮಾಡುತ್ತಿದ್ದಾರೆ. ಲಿಂಗಾಯಿತರನ್ನು ಪ್ರತ್ಯೇಕ ಧರ್ಮವಾಗಿಸುವ ಇವರ ನಡೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದರು.
ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಒಲವಿರುವ ಕೇಂದ್ರ ಸಕರ್ಾರ ನರೇಂದ್ರಮೋದಿಯವರ ಅಧ್ಯಕ್ಷತೆಯಲ್ಲಿ 70ವರ್ಷಗಳಿಂದ ಆಗದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಮುಂದಾಗಿದ್ದು, ಲೋಕ ಸಭೆಯಲ್ಲಿ ಕೆಲಸಕ್ಕೆ ಸರ್ವರಿಂದ ಅಂಗೀಕಾರ ದೊರಕಿದೆ, ರಾಜ್ಯ ಸಭೆಯಲ್ಲಿ ಅಂಗೀಕಾರ ಪಡೆಯಬೇಕಿದೆ. ಆಯೋಗದಿಂದ ಹಿಂದುಳಿದ ವರ್ಗಕ್ಕೆ ಸಿಗಬೇಕಿರುವ ಸವಲತ್ತುಗಳ ಬಗ್ಗೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾಲೋಚನಾ ಸಭೆ ಹಮ್ಮಿಕೊಂಡಿದ್ದು ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಹಿಂದುಳಿದ ಸಮುದಾಯದ ಪ್ರಮುಖರನ್ನು ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಕ್ಕೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೂಲಭೂತ ಹಕ್ಕುಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಈ ಸಂಧರ್ಭದಲ್ಲಿ ಪಾಲಿಕೆಸದಸ್ಯೆ ಶ್ವೇತಾವಿಜಯಕುಮಾರ್, ರಾಜ್ಯ ಒಬಿಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್, ಸಿ.ಎ.ಚಂದ್ರಶೇಖರ್, ಹೂಡಿ ವಿಜಯಕುಮಾರ್, ವೇಣುಗೋಪಾಲ್, ಅನಂತ ರಾಮಯ್ಯ, ಚಿಕ್ಕಣ್ಣ, ಲಕ್ಷ್ಮಣ್ ರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here