ಅಭಿವೃದ್ಧಿ ಹರಿಕಾರಣ 69ನೇ ಜನುಮದಿನ..

0
233

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಕ್ಷೇತ್ರದ ಶಾಸಕರಾದ ಶ್ರೀಯುತ ಸಿದ್ದು ನ್ಯಾಮಗೌಡರು 69ನೇ ಜನುಮದಿನವನ್ನ ಆಚರಿಸಿಕೊಳ್ಳುತ್ತಿದ್ದಾರೆ.ಶ್ರಮಜೀವಿ,ಬ್ಯಾರೆಜ್ ಸಿದ್ದು,ರೈತರ ಕಣ್ಮಣಿ,ಅಭಿವೃದ್ಧಿ ಹರಿಕಾರ ಎಂದು ಕ್ಷೇತ್ರದ ಜನತೆ ಅವರನ್ನ ಪ್ರೀತಿಯಿಂದ ಕರೆಯುತ್ತಾರೆ.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತಿರುವ ಅವರು ಎಲ್ಲ ವರ್ಗದ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಸಿದ್ದು ನ್ಯಾಮಗೌಡ್ ಅವರು ಜಮಖಂಡಿಯ ಗತವೈಭವಕ್ಕೆ ಮತ್ತೆ ಕಳೆತರುವಂತ ಯೋಜನೆಗಳನ್ನ ಕೈಗೊಂಡು ರಾಜ್ಯದ ಗಮನ ಸೆಳೆದಿದ್ದಾರೆ.ಅದ್ರಲ್ಲೂ ಜಮಖಂಡಿ ಬಳಿಯಿರುವ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರದವೇ ಸಾಕ್ಷಿ.ಜಮಖಂಡಿ ನಗರದಲ್ಲಿ14.5 ಕೋಟಿ ವೆಚ್ಚದಲ್ಲಿ ಸಂಸತ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಮಿನಿವಿಧಾನದಲಸೌಧ,ಸಿಂಗಾಪೂರ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ 14.5 ಕೋಟಿ ವೆಚ್ಚದಲ್ಲಿ ಕೇಂದ್ರ ಬಸ್ ನಿಲ್ದಾನ ಅಲ್ದೆ ರಾಣಿಚನ್ನಮ್ಮ ಮಾರುಕಟ್ಟೆ,ಮುಧೋಳ ಬೈಪಾಸ್ ರಸ್ತೆ ,ಜೊತೆಗೆ ಶಾಸಕರ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದೆ ಐತಿಹಾಸಿಕ ಕಟ್ಟೆಕೆರೆಯನ್ನ ಅಭಿವೃದ್ಧಿ ಪಡಿಸಿ ಸುತ್ತಮುತ್ತಲು 10ಸಾವಿರ ಸಸಿ ನೆಟ್ಟು ಹಸಿರುವೃದ್ದಿಗಾಗಿ ಶ್ರಮವಹಿಸಲಾಗುತ್ತಿದೆ.

ರೈತರಿಂದ ಕೃಷ್ಣಾರತ್ನ ಪ್ರಶಸ್ತಿ ಪಡೆದ ಬಡವರ ಬಂದು ಧಿಮಂತ ನಾಯಕ ಕೇಂದ್ರ ಮಾಜಿ ಸಚಿವ ಹಾಗೂ ಜಮಖಂಡಿ ಕ್ಷೇತ್ರದ ನೆಚ್ಚಿನ ಶಾಸಕ ಸಿದ್ದು ನ್ಯಾಮಗೌಡ್ ಅವರು ಇಂದು 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು,ಅಭಿವೃದ್ಧಿ ಹರಿಕಾರನಿಕೆ ಶುಭಾಶಯಗಳ ಸುರಿಮಳೆ ಹರಿದುಬರುತ್ತಿವೆ..

LEAVE A REPLY

Please enter your comment!
Please enter your name here