ಮಿನಿ ಬಸ್, ಟಿಪ್ಪರ್ ನಡುವೆ ಭೀಕರ ಅಪಘಾತ .

0
171

ಕೊಪ್ಪಳ: ಮಿನಿ ಬಸ್, ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 21 ಜನ ಗಾಯಗೊಂಡ ಘಟನೆ ಇಲ್ಲಿನ ಜಿಲ್ಲಾ ಕ್ರೀಡಾಂಗನದ ಸಮೀಪ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರವಿವಾರ ಬೆಳಗಿನ ಜಾವ ನಡೆದಿದೆ.

ಟೆಂಪೋ ಚಾಲಕ ಮಹಾಂತೇಶ್ (35) ಹಾಗೂ ಮೀನಾಕ್ಷಿ (45) ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ದೈವಿಗಳು. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದು, ಇದರಲ್ಲಿ 5 ಜನರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಹಾಗೂ ಖಾಸಗೀ ಆಸ್ಪತ್ರಗೆ ಸೇರಿಸದಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಲಾಗಿದೆ.

ಮಿನಿ ಬಸ್ ವೊಂದರಲ್ಲಿ ಸಂಬಂಧಿಕರ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮಿನಿ ಬಸ್ ಚಾಲಕ ಬಸ್ ಅವಶೇಷದೊಳಗೆ ಸಿಲುಕಿಕೊಂಡಿದ್ದ. ಜೆಸಿಬಿ ಮೂಲಕ ಹರಸಾಹಸಪಟ್ಟು ಚಾಲಕನ ಶವ ಹೊರತೆಗೆಯಲಾಗಿದೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸ್ ರು ತೆರವು ಕಾರ್ಯಾಚರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here