ವಿಕಲಚೇತನರಿಗೆ ಮೋಟಾರ್ ಸೈಕಲ್ ವಿತರಣೆ

0
189

ಬಳ್ಳಾರಿ /ಬಳ್ಳಾರಿ:ಶಾಸಕ ಟಿ.ಎಚ್.ಸುರೇಶ್ ಬಾಬು ಅವರಿಂದ ವಿಕಲ ಚೇತನರಿಗೆ ಮೋಟಾರ್ ಸೈಕಲ್ ವಿತರಣೆ

ತೀವ್ರ ತೆರನಾದ ದೈಹಿಕ ವಿಕಲಚೇತನ ಹೊಂದಿರುವ ಏಳು ಜನ ಫಲಾನುಭವಿಗಳಿಗೆ ಕಂಪ್ಲಿ ಕ್ಷೇತ್ರದ ಶಾಸಕ ಟಿ.ಎಚ್.ಸುರೇಶ್ ಬಾಬು ನಾಲ್ಕು ಗಾಲಿಯ ಯಂತ್ರಚಾಲಿತ ಮೋಟರ್ ಸೈಕಲ್ ವಾಹನಗಳನ್ನು ವಿತರಿಸಿದರು.

ಬಳ್ಳಾರಿಯ ಶಾಸಕರ ನೂತನ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗಾಗಿ ಮೀಸಲಿರಿಸಿದ ಶೇ 3 ರ ಅನುದಾನದಲ್ಲಿ ತಲಾ ರೂ.68 ಸಾವಿರ ಮೌಲ್ಯದ ನೂತನ 7 ವಾಹನಗಳನ್ನು ವಿತರಿಸಿದರು.

ಹೊಸಪೇಟೆ ಚಿಕ್ಕಜಾಯಿಗನೂರಿನ ಶೇಷಗಿರಿ, ದೇವಲಾಪುರದ ಚನ್ನದಾಸರ ಮೇಘರಾಜ, ಬಳ್ಳಾರಿ ತಾಲೂಕಿನ ಕೊರ್ಲಗುಂದಿಯ ಕೆ.ಗಾದಿಲಿಂಗ, ಹಂದಿಹಾಳ್ ನ ಪಿ.ಮರ್ಜಾನಾ, ವದ್ದಟ್ಟಿಯ ದೊಡ್ಡ ಬಸಪ್ಪ, ಎರ್ರಂಗಳಿಯ ಹೆಚ್.ಲಕ್ಷ್ಮಣ ಮತ್ತು ಎಮ್ಮಿಗನೂರಿನ ರಾಜಶೇಖರ್ ಅವರಿಗೆ ವಾಹನ ವಿತರಿಸಿ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಈವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಲೋಕಸಭಾ ಸದಸ್ಯರ ಅನುದಾನದಲ್ಲಿ ಇನ್ನೂ ಮೂವರು ಫಲಾನುಭವಿಗಳಿಗೆ ವಾಹನ ವಿತರಿಸಲಾಗುತ್ತಿದೆ. ಹದಿನೈದು ಜನರಿಗೆ ವಾಹನ ಸೌಲಭ್ಯ ಒದಗಿಸಬೇಕಾಗಿದೆ. ಹೊಸದಾಗಿ 25 ಅರ್ಜಿಗಳು ತಮ್ಮ ಕ್ಷೇತ್ರದ ವಿಕಲಚೇತರಿಂದ ಬಂದಿವೆ. ಅವುಗಳನ್ನೂ ಪರಿಶೀಲಿಸಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತರಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಮಹಾಂತೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ, ಯೋಜನಾ ನಿರ್ದೇಶಕ ಕೆ.ಧನಂಜಯ, ಕಂಪ್ಲಿ ಕ್ಷೇತ್ರದ ಬಿಜೆಪಿ ಮುಖಂಡರಾದ ಶಿವನಗೌಡ, ಕೇಶವ, ಪಂಪಾಪತಿ, ನಾಗಪ್ಪ, ತಿಪ್ಪೇಸ್ವಾಮಿ, ಮಾರೆಪ್ಪ ಇನ್ನಿತರರು ಇದ್ದರು

LEAVE A REPLY

Please enter your comment!
Please enter your name here