ಮಾಲಾದಾರಿಗಳ ಪುಣ್ಯಕ್ಷೇತ್ರಗಳ ಭೇಟಿ

0
155

ಬಳ್ಳಾರಿ /ಹೊಸಪೇಟೆ : ಐತಿಹಾಸಿಕ ಹಂಪಿಯ ವಿರುಪಾಕ್ಷೇಶ್ವರ ಸ್ವಾಮೀ ಮಾಲಾಧಾರಿಗಳು ಶ್ರಾವಣ ಮಾಸದ ನಿಮಿತ್ತ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಸ್ಥಳಗಳಿಗೆ ಬೇಟೆ ನೀಡಿ ಪೌರಾಣಿಕ ಮಹಾತ್ಮೆಯ ಅನುಭವ ಪಡೆದರು. ಶಿವಭಟ್ಟ ಜೋಶಿ ನೇತೃತ್ವದ ತಂಡವು ಇಂದು ತುಂಗಭದ್ರ ಸ್ನಾನ ಮಾಡಿ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗೆ ಬೇಟಿ ನೀಡಿದರು. ಜಿಲ್ಲೆಯ ಬುಕ್ಕಸಾಗರ ಗ್ರಾಮ, ಸಂಡೂರು, ಆನೇಗುಂದಿ, ಸಿಂದನೂರು ತಾಲೂಕಿನ ಅಂಬಮ್ಮ ದೇವಾಸ್ಥಾನಕ್ಕೆ ಭಕ್ತರು ಬೇಟಿ ನೀಡಿ ಭಕ್ತಿ ಪರಾಕಾಷ್ಟೆ ಮೆರೆದರು. ಪ್ರತಿ ವರ್ಷದಂತೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಕ್ತಾಧಿಗಳು ಈ ವರ್ಷವು ಸಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ವಿರೂಪಾಕ್ಷನ ಭಕ್ತಿಯನ್ನು ತೋರಿದರು. ಬಳಿಕ ಹಂಪಿಯ ಜನತಾಪ್ಲಾಟ್‍ನಲ್ಲಿ ಬಿಕ್ಷಾಟನೆ ಮಾಡಿ ಧಾನ್ಯಗಗಳನ್ನು ಸಂಗ್ರಹಿಸಿ ಆಹಾರ ತಯಾರಿಸಿ ಬೋಜನ ಸ್ವೀಕರಿಸಿ ಶಿವನ ಭಕ್ತಿ ಮೆರೆದರು. ಮಾಲಧಾರಿಗಳಾದ ಉಮಾಪತಿ, ಗೋಪಾಲ್, ರವಿ ಬಾಬ, ಪಂಪಾಪತಿ, ಶ್ರೀನಿವಾಸ, ಗೋಪಿನಾಥ, ಹುಲುಗಪ್ಪ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here