ಬಳ್ಳಾರಿ /ಹೊಸಪೇಟೆ:ಪರಸ್ಪರ ಸ್ನೇಹ-ಸಂಬಂಧ ವೃದ್ಧಿಗೆ ಕ್ರೀಡೆಗಳು ಉತ್ತಮ ವೇದಿಕೆಯನ್ನು ಸೃಷ್ಠಿ ಮಾಡುತ್ತವೆ ಎಂದು ತಹಸೀಲ್ದಾರ ಹೆಚ್.ವಿಶ್ವನಾಥ ಹೇಳಿದರು.
71ನೇ ಸ್ವಾತಂತ್ರ್ಯೋತ್ಸವ ನಿಮಿತ್ತವಾಗಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ ರಾಜ್ಯ ಸರ್ಕಾರಿ ನೌಕರರ ಸಂಘ ಶನಿವಾರ ಆಯೋಜಿಸಿದ್ದ ಫ್ರೇಂಡ್ಲಿ ಕ್ರಿಕೇಟ್ ಕಪ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜತೆಗೆ ಬೇರೆ ಬೇರೆ ವ್ಯಕ್ತಿಗಳ ಜತೆಗೆ ಉತ್ತಮ ಬಾಂದವ್ಯ ಬೆಸೆಯಲು ಉತ್ತಮ ವೇದಿಕೆಯಾಗುತ್ತದೆ ಎಂದರು. ಕ್ರೀಡೆಗಳು ಕೇವಲ ದೈಹಿಕ ಹಾಗೂ ಮಾನಸಿಕ ಸಧೃಡವಾಗದೆ, ಪ್ರತಿಯೊಬ್ಬ ಆಟಗಾರರಲ್ಲು ಆತ್ಮ ವಿಶ್ವಾಸ ಹೆಚ್ಚಿಸುತ್ತಿದೆ. ಈಗ ಸ್ವಾತಂತ್ರೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಈ ಕ್ರಿಕೇಟ್ ಪಂದ್ಯದಲ್ಲಿ ಪತ್ರಕರ್ತರು, ಹಲವು ಇಲಾಖೆಗಳ ಅಧಿಕಾರಿಗಳು, ಪೊಲೀಸರು ಸೇರಿ ಅಟ ಆಡುವ ಮೂಲಕ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್, ಬಿಜೆಪಿ ಮುಖಂಡ ಧರ್ಮೇಂದ್ರ ಸಿಂಗ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎನ್.ಎಸ್.ರೇವಣ ಸಿದ್ದಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಕುಮಾರ್ ಸ್ವಾಮಿ, ಚೇಬರ್ ಆಫ್ ಕಾಮರ್ಸ್ ಅಧ್ಯಕ್ಷ ಆಶ್ವಿನ್ ಕೊತಂಬ್ರಿ, ಬಿಇಒ ಎಲ್.ಡಿ ಜೋಷಿ, ಪಿಐ ಮೃತ್ಯುಂಜಯ, ಗಣಿ ಮತ್ತು ಭೂ ವಿಜ್ಞಾನ ಉಪ ನಿರ್ದೇಶಕ ಮಹಾವೀರ್, ಕಡ್ಲಿ ವೀರಭದ್ರೇಶ, ಧರ್ಮನಗೌಡ, ಎಸ್.ಬಸವರಾಜ್ ನಿರೂಪಿಸಿದರು.