ಸಾಂಸ್ಕೃತಿಕ ಕಾರ್ಯಕ್ರಮ…

0
124

ಮಂಡ್ಯ/ಮಳವಳ್ಳಿ:ಶಾಲೆಗೆ ಬಂದು ವಿದ್ಯೆ ಕಲಿತರೆ ಸಾಲದು. ಅದನ್ನು ನಿಮ್ಮ ಮನೆಯ ಅಕ್ಕಪಕ್ಕದ ಮಂದಿಯೊಂದಿಗೆ ಹಂಚಿಕೊಳ್ಳಿ ಆಗ ಮಾತ್ರ ನೀವು ಕಲಿತ ವಿದ್ಯೆಗೆ ಬೆಲೆ ಸಿಗುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ವಿ ಕೃಷ್ಣ ತಿಳಿಸಿದರು.ಮಳವಳ್ಳಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಿರಿಯರಿಂದ ಕಿರಿಯ ವಿದ್ಯಾರ್ಥಿ ನಿಯರಿಗೆ ಸ್ವಾಗತ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಕಾಲೇಜು ಮಟ್ಟದಲ್ಲಿ ಹಿರಿಯರು ಕಿರಿಯ ಸಹಪಾಠಿಗಳನ್ನು ಚುಡಾಯಿಸುತ್ತಿದ್ದರು, ಈಗ ಬದಲಾಗಿದೆ ಸ್ವಾಗತ ಕಾರ್ಯಕ್ರಮ ದಿಂದ ಪರಸ್ಪರ ಪರಿಚಯ ಬೆಳೆಯುತ್ತದೆ. ಇದರ ಜೊತೆಗೆ ಜ್ಞಾನವನ್ನು ವೃದ್ದಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮ ದಲ್ಲಿ ಕಾಲೇಜಿನ ಪ್ರಾಂಶುಪಾಲ ಬೈರಪ್ಪ, ನಿಂಗರಾಜು, ಶಿವಣ್ಣ .ಸೌಭಾಗ್ಯ, ಸೇರಿದಂತೆ ಮತ್ತಿತ್ತಿರರು ಇದ್ದರು.

LEAVE A REPLY

Please enter your comment!
Please enter your name here