ಲಂಚಾಧಿಕಾರಿಯನ್ನು ಅಮಾನತ್ತು ಮಾಡುವಂತೆ ಮನವಿ.

0
229

ಬಳ್ಳಾರಿ /ಸಂಡೂರು:ಜನಸಂಗ್ರಾಮ ಪರಿಷತ್ ಸಂಘಟನೆ ಯಿಂದ ಲಂಚ ಪಡೆದ ಸಂಡೂರು ಪುರಸಭೆ ಲೆಕ್ಕಾಧಿಕಾರಿ ಪ್ರಭುರಾಜ್ ಹಗರಿ ಯನ್ನು ಅಮಾನತ್ತು ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಸಂಡೂರಿನ ತಹಶೀಲ್ದಾರ್ ನಾಗರಾಜ.ಯು ಇವರಿಗೆ ಸಂಡೂರು ಪುರಸಭೆಯಲ್ಲಿ ಸಮುದಾಯದ ಅಭಿವೃದ್ದಿ ಯನ್ನು ಮಾಡಬೇಕಾದ ಪ್ರಭುರಾಜ್ ಎಂಬ ಅಧಿಕಾರಿ ಲಂಚದ ಹಣದಿಂದ ತಾನು ಅಭಿವೃದ್ದಿ ಯಾಗುತ್ತಿದ್ದು, ಆತನ ಲಂಚಾವತಾರದ ಬಗ್ಗೆ ಹಾಗು ಅಕ್ರಮ ಆಸ್ತಿಯ ಬಗ್ಗೆ ಭ್ರಷ್ಟಾಚಾರ ನಿಗ್ರಹ ತಂಡ ದಿಂದ ತನಿಖೆ ಮಾಡುವ ಮೊದಲು “ಅಮಾನತ್ತು”ಗೊಳಿಸಿ ತನಿಖೆಯನ್ನು ನಡೆಸ ಬೇಕೆಂದು ಒತ್ತಾಯಿಸಲಾಗಿದೆ.ಶ್ರೀಶೈಲ ಆಲದಹಳ್ಳಿ ಇವರು, ಬಳ್ಳಾರಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿ ಆಗ್ರಹಿಸಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಸಂಡೂರು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾಡಳಿತ ಹಾಗು ಸಂಡೂರು ತಾಲೂಕು ಆಡಳಿತವು ಭ್ರಷ್ಟರ ವಿರುದ್ದ ಶಿಕ್ಷೆಯಾಗುವಂತೆ ಮಾಡುತ್ತಾರೊ? ಅಥವ ತಿಪ್ಪೆ ಸಾರಿಸುತ್ತಾರೊ? ಕೈಗೊಳ್ಳುವ ನಿಲುವು ಯಾವ ರೀತಿಯಲ್ಲಿರುತ್ತದೆಯೆಂದು ಕಾದುನೋಡುತ್ತೇವೆ ಎಂದೂ ಅವರು ಹೇಳಿದ್ದಾರೆ

LEAVE A REPLY

Please enter your comment!
Please enter your name here