ಬಳ್ಳಾರಿ /ಹೊಸಪೇಟೆ:ತಾಲೂಕಿನ ಐತಿಹಾಸಿಕ ಹಂಪಿ ಕಮಲಾಪುರ ಕೆರೆ ಹಾಗೂ ಹಳ್ಳಿಕೆರಯಲ್ಲಿ ವಿವಿಧ ಬಗೆಯ ಹಕ್ಕಿಗಳ ಹಾರಾಟ ನೋಡುಗರ ಗಮನ ಸೆಳೆಯುತ್ತಿದೆ.
ಕಳೆದ ಎರಡುದಿನಗಳಿಂದ ಹಂಪಿ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವ ಪ್ಲಮಿಂಗೋ(ಸಮುದ್ರ ಗಿಣಿ), ಪಿಲಿಕ್ಯಾನ್(ಹೆಜಾರ್ತಿ), ಪೇಂಟೆಡ್ ಸ್ಟಾರ್ಕ್(ಬಣ್ಣದ ಕೊಕ್ಕರೆ), ಒಪನ್ ಬಿಲ್ ಸ್ಟಾರ್ಕ್(ತೆರೆದ ಕೊಕ್ಕಿನ ಕೊಕ್ಕರೆ) ಪ್ರವಾಸಿಗರ ಮತ್ತು ರಸ್ತೆ ಸಂಚಾರಿಗಳ ಗಮನಸೆಳೆದಿವೆ. ಈ ನಾಲ್ಕು ಬಗೆಯ ಹಕ್ಕಿಹಳು ಕೆರೆಯ ಆಹಾರ ಅರಸಿ ವಲಸೆ ಬಂದಿವೆ. ಈ ಮುಂಚೆ ತುಂಗಾಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿದ್ದ ಹಕ್ಕಿಗಳು ಆಹಾರದ ಕೊರತೆಯಿಂದ ಇಲ್ಲಿಗೆ ಬಂದಿವೆ ಎಂಬುದು ಸ್ಥಳೀಯರ ಅಂಬೋಣ.
ಪ್ಲಮಿಂಗೋ ಹಕ್ಕಿಗಳು ಗುಜರಾತ್ ಮೂಲದ ಕಚ್ ಪ್ರದೇಶದಲ್ಲಿ ವಾಸಿಸುತತಿದ್ದು, ಪ್ರತಿವರ್ಷ ಚಳಿಗಾಲದಲ್ಲಿ ಕರ್ನಾಟಕದ ಹಲವು ನದಿಗಳ ಹಿನ್ನೀರು ಪ್ರದೇಶಕ್ಕೆ ಸೇರಿಕೊಳ್ಳುತ್ತವೆ. ಈ ಹಕ್ಕಿಗಳ ಗುಂಪು ಸುಮಾರು 1000 ಅಧಿಕಾವಾಗಿರುತ್ತದೆ. ಸುಮಾರು 80ಕ್ಕೂ ಹೆಚ್ಚು ಹಕ್ಕಿಗಳು ಇಲ್ಲೆ ಉಳಿದುಕೊಂಡಿವೆ. ಅಲ್ಲದೇ ಮಲೆನಾಡಿನಲ್ಲಿ ಮಳೆ ಜಾಸ್ತಿಯಾಗುತ್ತಿದ್ದು, ತುಂಗಭದ್ರಾ ಜಲಾಶಯದ ಮಟ್ಟ ಕೂಡ ಏರಿಯಾಗಿತ್ತಿದೆ. ಇದರಿಂದ ನದಿಯಲ್ಲಿ ಆಹಾರದ ಕೊರೆತೆ ಕಂಡು ಬಂದ ಹಿನ್ನಲೆಯಲ್ಲಿ ಕಮಲಾಪುರ ಕೆರೆಗೆ ಬಂದಿವೆ. ಇದರ ಜತೆಯಲ್ಲಿ ಮೈಸೂರ್ ವ್ಯಾಪ್ತಿಯ ರಂಗನದಿಟ್ಟು ಪಕ್ಷಿಧಾಮ ಹಾಗೂ ಕೊಕ್ಕೊರೆ ಬೆಳ್ಳೂರಿನಲ್ಲಿ ಕಂಡುಬರುವ ಸುಮಾರು 38 ಪಿಲಿಕ್ಯಾನ್ ಹಕ್ಕಿ, 50 ಪೇಂಟೆಡ್ ಸ್ಟಾರ್ಕ್ ಹಕ್ಕಿಗಳು, 18 ಒಪನ್ ಬಿಲ್ ಸ್ಟಾರ್ಕ್ ಹಕ್ಕಿಗಳು ಐತಿಹಾಸಿಕ ಹಳ್ಳಿಕೆರೆ ಹಾಗೂ ಮಲಾಪುರ ಕೆರೆಯಂಗಳದಲ್ಲಿ ಕುಣಿಯುತ್ತ ನಾಟ್ಯ ವಾಡುವುದನ್ನು ನೂರಾರು ಜನ ಕಣ್ತುಂಬಿಕೊಂಡರು.
ಪರಿಸರದ ವರ್ಷದಿಂದ ವಷಕ್ಕೆ ಹೆಚ್ಚಾಗುವ ದುಶ್ಚಪರಿಣಾಮದಿಂದಾಗಿದೆ. ಪ್ರಾಣಿ-ಪಕ್ಷಿ ಸಂಕುಲಕ್ಕೆ ಆಹಾರದ ಕೊರತೆ ಉಂಟಾಗಿದೆ. ಸತತ ಮಳೆಯ ಕೊರತೆಯಿಂದ ನದಿ ಪಾತ್ರಗಳು ಸಹ ಭತ್ತಿ ಹೋಗಿದ್ದು, ಪಕ್ಷಿಗಳು ಆಹಾರ್ಕಕಾಗಿ ಒಂದೆಡೆಯಿಂದ ಮತ್ತೊಂದೆ ವಲಸೆ ಹೊಗುವುತ್ತಿವೆ.
ಪಂಪಯ್ಯ ಸ್ವಾಮಿ ಮಳೆಮಠ್ ವನ್ಯ ಜೀವಿ ಪ್ರೇಮಿ.