ಅಕ್ರಮ ಮದ್ಯಮಾರಾಟದ ಮನೆಗಳ ಮೇಲೆ ದಾಳಿ

0
977

ಬಳ್ಳಾರಿ /ಹೊಸಪೇಟೆ;ನಗರದ ಅನಂತಶಯನ ಗುಡಿ ರೇಲ್ವೇ ಗೇಟ್ ಬಳಿ ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ಎರಡು ಮನೆಯ ಮೇಲೆ ಭಾನುವಾರ ಎಸಿ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ತಹಸೀಲ್ದಾರ ಎಚ್.ವಿಶ್ವನಾಥ್ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 35 ಸಾವಿರ ರೂಗಳ ಮದ್ಯದ ಬಾಟಲಿಗಳನ್ನು ವಶಪಡಿಸಿ ಕೊಂಡಿದ್ದಾರೆ.ಗಣೇಶೊತ್ಸವ ಹಿನ್ನಲೆಯಲ್ಲಿ ಮುಂದಿನ ಮೂರು ದಿನದವರೆ ಯಾವುದೇ ಮದ್ಯ ಮಾರಾಟ ಮಾಡವಾರದು ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹತ್ ರವರು ಆದೇಶ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ತಹಸೀಲ್ದಾರಎಚ್.ವಿಶ್ವನಾಥ್ ಪ್ರತಿ ಮದ್ಯ ಮಾರಾಟ ಅಂಗಡಿಗಳಿಗೆ ಸೂಚಿಸಿದ್ದರು , ಅದನ್ನು ಮೀರಿ ನಗರದ ಹಂಪಿ ರಸ್ತೆಯಲ್ಲಿನ ವಿಶ್ವಾಸ್ ವೈನ್ಸ್ ಅಂಗಡಿಯಿಂದ ಎರಡು ಮನೆಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ನೀಡಲು ಹೇಳಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಂಬುಜಮ್ಮ ಹಾಗೂ ಗಿರಿಜಮ್ಮ ಎನ್ನುವವರ ಮನೆ ಮೆಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ಎರಡು ಮನೆಯಲ್ಲಿ 25 ಅಕ್ರಮ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿ. ತರಾಟೆ: ಜಿಲ್ಲಾದ್ಯಂತ ಗಣೇಶೊತ್ಸವವನ್ನು ಶಾಂತಿಯುವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮದ್ಯದ ಅಂಗಡಿಗಳಿಗೆ ಮಾರಾಟ ಮಾಡದಂತೆ ಸೂಚಿಸಿದ್ದರು, ಮಾರಾಟ ನಡೆಯುತ್ತಿದೆ. ಇದಕ್ಕೆ ನಿಮ್ಮ ನಿರ್ಲಕ್ಷೆ ಕಾರಣ ಎಂದು ಸ್ಥಳದಲ್ಲಿದ್ದ ಅಬಕಾರಿ ಇಲಾಖೆ ಅದಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು. ಇನ್ನು ಮೂರು ದಿನದವರೆ ಎಲ್ಲಾದರು ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ನಿಮ್ಮ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಸಿಪಿಐ ಮೃತ್ಯುಂಜಯ, ಅಬಕಾರಿ ಇನ್ಸ್ಪೆಕ್ಟರ್ ಅಂಬಣ್ಣ, ಎನ್.ಎಸ್.ಘೊರ್ಪಡೆ ಇದ್ದರು.

LEAVE A REPLY

Please enter your comment!
Please enter your name here