ವರ್ಗಾವಣೆ ಪ್ರಮಾಣ ಪತ್ರ ಮಾರಾಟಕ್ಕಿದೆ..!?

0
415

ಬೆಂಗಳೂರು/ಮಹದೇವಪುರ:– ನೀವು ಏನೂ ಓದೇ ಇಲ್ವ ಪರವಾಗಿಲ್ಲ, ನೀವು ಮೇಲ್ವರ್ಗದ ಜಾತಿಯವರ ನಿಮಗೆ ದಲಿತ ಸಮುದಾಯದ ಪ್ರಮಾಣ ಪತ್ರ ಬೇಕಾ ನೀವು ತೊಂದರೆ ಪಡಬೇಡಿ. ಹಣ ಕೊಟ್ಟರೆ ಸಾಕು ನೀವು ಓದದಿದ್ದರೂ ಪರವಾಗಿಲ್ಲ, ಬೇರೆ ರಾಜ್ಯದವರು ಕೊನೆಗೆ ಬೇರೆ ದೇಶದವರಾದರೂ ಪರವಾಗಿಲ್ಲ ನಿಮಗೆ ಟಿಸಿ ಸಿಗುತ್ತೆ, ಇನ್ನು ಹೆಚ್ಚು ಕೊಟ್ರೆ ಎಸ್ಸಿ ಜಾತಿಯ ಪ್ರಮಾಣಪತ್ರ ಸಹ ಸಿಗುತ್ತೆ, ಅರೇ ಇದು ಹೇಗೆ ಸಾದ್ಯ ಅಂತೀರ ಈ ಸ್ಟೋರಿ ನೋಡಿ.
ಇಂತಹ ಟಿಸಿಗಳು ಮಾರಾಟ ಆಗುತ್ತಿರುವುದು ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ, ಇಲ್ಲಿನ ಮುಖ್ಯ ಶಿಕ್ಷಕ ಮುನಿನಾರಾಯಣ ಇದರ ಪ್ರಮುಖ ಆರೋಪಿ. ಕಳೆದ 15 ವರ್ಷಗಳಿಂದಲೂ ಇದೇ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿರುವ ಈತ ಇನ್ನೇನು ಇದೇ ತಿಂಗಳ ೩೧ ನೆ ತಾರೀಖು ನಿವೃತ್ತಿ ಹೊಂದಲಿದ್ದಾನೆ, ಈತನ ಅಕ್ರಮಗಳು ಈಗ ಬಯಲಾಗಿವೆ, ಡಿ. ವಸುಧಾ ಎಂಬುವವರು ಮೂಲತಹ ಆಂದ್ರ ದವರು, ಕ್ರೈಸ್ತ ಸಮುದಾಯಕ್ಕೆ ಸೇರಿದ್ದು ಈಕೆ ಪದವಿದರೆಯೂ ಆಗಿದ್ದಾರೆ, ದಲಿತ ವರ್ಗಕ್ಕೆ ಸೇರಿದ ವಿ. ಮಂಜು ಎಂಬುವರೊಂದಿಗೆ ಪ್ರೇಮ ವಿವಾಹ ವಾಗಿದೆ. ಆದರೆ ಈಕೆಗೆ ಅಟ್ರಾಸಿಟಿ ಕೇಸ್ ಹಾಕಿಸ ಬೇಕೆಂಬ ಸೇಡಿನಿಂದ ವ್ಯಾಸಂಗವನ್ನೇ ಮಾಡದ ವತರ್ೂರು ಶಾಲೆಯಲ್ಲಿ ತಾನು ವ್ಯಾಸಂಗ ಮಾಡಿರುವಂತೆ ನಖಲಿ ದಾಖಲೆ ಸೃಷ್ಟಿಸಿ ಅನುಸೂಚಿತ ಜಾತಿ ಎಂದು ಅಕ್ರಮವಾಗಿ ದಾಖಲೆ ಸೃಷ್ಟಿಸಿದ್ದಾರೆ. ಇದಕ್ಕೆ ನೇರವಾಗಿ ಮುಖ್ಯ ಶಿಕ್ಷಕ ಹಣದ ಆಸೆಗೆ ಸಹಕರಿಸಿದ್ದಾರೆ ಎಂದು ದೂರು ದಾರ ಮನೋಹರ್ರೆಡ್ಡಿ ಆರೋಪಿಸಿದ್ದಾರೆ.

ಬೈಟ್; ಮನೋಹರ್ ರೆಡ್ಡಿ. ದೂರುದಾರ.

ಯಾವುದೇ ಜಾತಿ ಧರ್ಮಕ್ಕೆ ಸಿಗಬಹುದಾದ ಸೌಲತ್ತುಗಳನ್ನು ಪಡೆಯಲು ವರ್ಗಾವಣೆ ಪ್ರಮಾಣ ಪತ್ರ ಅತ್ಯಗತ್ಯ ಹಾಗಾಗಿ ಇದನ್ನೇ ಬಂಡವಾಳವಾಗಿಸಿಕೊಂಡಿರುವ ಶಿಕ್ಷಕರು ಇಂತಹ ನೀಚ ಕೆಲಸಕ್ಕೆ ಮುಂದಾಗಿದ್ದಾರೆ, ಈ ಬಗ್ಗೆ ಅನೇಕ ದೂರುಗಳು ಬಂದಿರುವ ಕಾರಣ ಶಾಲೆಯ ದಾಖಲಾತಿಗಳನ್ನು ಮುಟ್ಟುಗೋಲು ಹಾಖಿಕೊಂಡು ತನಿಖೆ ನಡೆಸಲಾಗುತ್ತಿದ್ದು ಮೇಲ್ನೋಟಕ್ಕೆ ಅಕ್ರಮ ಸಾಬೀತಾಗಿದೆ, ಹಾಗಾಗಿ ಮುಖ್ಯ ಶಿಕ್ಷಕ ಮುನಿನಾರಾಯಣ ವಿರುದ್ದ ಶಿಸ್ತು ಕ್ರಮ್ಕಕೆ ಹಿರಿಯ ಅಧಿಕಾರಿಗಳೊಂದಿಗೆ ಪತ್ರವ್ಯವಹಾರ ನಡೆಸಲಾಗಿದ್ದು ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ ಎಂದು ಬಿಇಒ ರಮೇಶ್ ತಿಳಿಸಿದ್ದಾರೆ.

ಬೈಟ್; ರಮೇಶ್ ಬಿಇಒ ಬೆಂಗಳೂರು ದಕ್ಷಿಣ ವಿಭಾಗ.

ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂದು ತಂದೆ ತಾಯಿಯೊಂದಿಗೆ ಶಿಕ್ಷಕರಿಗೂ ದೇವರ ಸ್ಥಾನ ಮತ್ತು ಶಾಲೆಗೆ ದೇವಾಲಯದ ಪ್ರತಿರೂಪ ಎಂದು ನಂಬಲಾಗಿದೆ ಇಂತಹ ಶಿಕ್ಷಕರೇ ತಪ್ಪು ದಾರಿಹಿಡಿದಿರುವುದು ಬೇಸರದ ಸಂಗತಿ ಆದಷ್ಟು ಬೇಗ ಕಠೀಣ ಶಿಕ್ಷೆ ಆಗಬೇಕು ಮತ್ತು ಇದು ಬೇರೆ ಶಿಕ್ಷಕರಿಗೆ ಪಾಠವಾಗ ಬೇಕಾಗಿದೆ.

LEAVE A REPLY

Please enter your comment!
Please enter your name here