ಪಠ್ಯದ ಜತೆಗೆ ಕ್ರೀಡೆಯೂ ಮುಖ್ಯ

0
207

ಬಳ್ಳಾರಿ,/ಬಳ್ಳಾರಿ:ಪಾಠ-ಪ್ರವಚನದ ಜತೆಗೆ ಕ್ರೀಡೆಯೂ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ ಮತ್ತು ಶಿಕ್ಷಣದಲ್ಲಿ ಆಸಕ್ತಿ ಮೂಡುತ್ತದೆ ಎಂದು ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಳ್ಳಾರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು,ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಮತ್ತು ಆಟಗಳನ್ನು ಎಂಜಾಯ್ ಮಾಡಬೇಕು ಮತ್ತು ಎಲ್ಲರು ಕ್ರೀಡಾಸ್ಪೂರ್ತಿಯಿಂದ ಆಟವಾಡಬೇಕು ಎಂದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಅವರು ಹಾಕಿಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ನಮ್ಮ ಕ್ರೀಡಾಪಟುಗಳು, ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಮಾಜಸೇವಕ ಗಾದೆಪ್ಪ, ಹಾಕಿ ಕ್ರೀಡಾಪಟು ವಿಜಯಲಕ್ಷ್ಮೀ, ಯುವಸಬಲೀಕರಣ ಮತ್ತು ಕ್ರೀಡಾ  ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ, ಶಿಕ್ಷಣ ಇಲಾಖೆಯ ಅಧಿಕಾರಿ ರೆಹಮಾನ್ ಮತ್ತಿತರರು ಇದ್ದರು.
ಈ ಕ್ರೀಡಾಕೂಟದಲ್ಲಿ 36 ಕಬಡ್ಡಿ ತಂಡಗಳು, 22ಖೋ-ಖೋ ತಂಡಗಳು, 16 ವ್ಹಾಲಿಬಾಲ್, 06 ಬಾಲ್ ಬ್ಯಾಡ್ಮಿಂಟನ್, 12 ಪುಟ್ಬಾಲ್ ತಂಡಗಳು,ಅಥ್ಲೆಟಿಕ್ಸ್,ಥ್ರೋಬಾಲ್, ನೆಟ್‍ಬಾಲ್, ಭಾಸ್ಕೆಟ್‍ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here