ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ‌

0
281

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಮಿಂಡಿಗಲ್ ಪಂಚಾಯಿತಿ ಬೋಡನಮರಿ ಗ್ರಾಮದಲ್ಲಿ ಮೊತ್ತ 8.50 ಲಕ್ಷ, ಮತ್ತು ಕೋಟಗಲ್ ಪಂಚಾಯಿತಿ ಕುರುಮಾರ್ಲಹಳ್ಳಿ ಗ್ರಾಮದಲ್ಲಿ ಮೊತ್ತ8.50 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಂಬಾಜಿದುರ್ಗ ಹೋಬಳಿಯ ಕೋಟಗಲ್ ಕೆರೆಗೆ ಬರುವ ಪೋಷಕ ಕಾಲುವೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಣ ಮಾಡುವ 40 ಲಕ್ಷದಲ್ಲಿ ನಿರ್ಮಾಣ ಕಾಮಗಾರಿಗೆ ಚಿಂತಾಮಣಿ ವಿಧಾನ ಸಭಾ ಕ್ಷೇತ್ರದ ಶಾಸಕರು ಜೆ.ಕೆ ಕೃಷ್ಣಾ ರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.

ಕೆ.ರಾಗುಟ್ಟಹಳ್ಳಿ,ಬೂರಗಮಾಕಲ ಹಳ್ಳಿ ,ದೊಡ್ಡಗಂಜೂರು ,ಕೊಡದವಾಡಿ ,ಅನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮವನ್ನು ಮಾನ್ಯ ಶಾಸಕರು ಜೆ.ಕೆ .ಕೃಷ್ಣಾ ರೆಡ್ಡಿ ರವರು ಉದ್ಘಾಟನೆ ಮಾಡುವ ಮುಖಾಂತರ ಉಚಿತ ಸೈಕಲ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಜೆಡಿ ಎಸ್. ರಾಜ್ಯ ಉಪಾಧ್ಯಕ್ಷ, ಷಫೀಕ್ ಅಹ್ಮದ್, ವೇಣು, ಶಿವು ,ಮತ್ತು ಶಾಲೆಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು, ಶಾಲೆ ಮಕ್ಕಳ ಪೋಷಕರು ಮುಂತಾದವರು ಉಪಸ್ಥಿತಿಯಿದ್ದರು.

ವರದಿ:ಇಮ್ರಾನ್ ಖಾನ್
ನಮ್ಮೂರು ಟಿವಿ ಚಿಂತಾಮಣಿ.

LEAVE A REPLY

Please enter your comment!
Please enter your name here