ವಿವಿಧ ಬೇಡಿಕೆಗಾಗಿ ಸಿಪಿಐಎಂ ಪ್ರತಿಭಟನೆ

0
157

ಬಳ್ಳಾರಿ /ಹೊಸಪೇಟೆ:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ನೂರಾರು ನಾಗರಿಕರು, ತಹಶೀಲ್ದಾರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಹಶೀಲ್ದಾರ ಕಚೇರಿ ಆವರಣದಲ್ಲಿ ಜಮಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಗಳನ್ನು ಗಾಳಿ ತೂರಿ, ಬದಲಿಗೆ ದಿನಕ್ಕೊಂದು ಹೊಸ ಘೋಷಣೆಗಳನ್ನು ಮಾಡುವ ಮೂಲಕ ಸಾರ್ವಜನಿಕ ವಲಯ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದೇಶದಲ್ಲಿನ ಕಪ್ಪು ಹಣವನ್ನು ದೇಶಕ್ಕೆ ಮರಳಿ ತಂದು ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದು. ಪ್ರತಿ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಠಿ, ರೈತರ ಕೃಷಿ ಉತ್ಪಮಗಳಿಗೆ ಉತ್ಪಾದನಾ ವೆಚ್ಚದಲ್ಲಿ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನೀಡಿಕೆ. ಮಹಿಳಾ ಮೀಸಲಾತಿ ಮಸೂದೆ ಜಾರಿ ಸೇರಿದಂತೆ ಇತರೆ ಹಲವಾರು ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡಿದ ಕೇಂದ್ರ ಸರ್ಕಾರ ಇದೀಗ ಮುಂದಿನ ಚುನಾವಣೆಯ ಗೆಲುವಿನ ಲೆಕ್ಕಚಾರದಲ್ಲಿ ತೊಡಗಿಕೊಂಡಿದೆ ಎಂದು ದೂರಿದರು.
ಮುಖಂಡರಾದ ಆರ್.ಭಾಸ್ಕರರೆಡ್ಡಿ, ಎಂ. ಜಂಬಯ್ಯ ನಾಯಕ, ಕೆ.ನಾಗರತ್ನಮ್ಮ, ಆರ್.ಎಸ್.ಬಸವರಾಜ, ಕೆ.ರಮೇಶ, ಬಿ.ಮಹೇಶ, ಎಲ್.ಮಂಜುನಾಥ, ಎ.ಕರುಣಾನಿಧಿ, ಉಮಾಮಹೇಶ್ವರ, ಕೆ.ಎಂ.ಸಂತೋಷ, ಮಧುರಚೆನ್ನಶಾಸ್ತ್ರಿ, ಯಲ್ಲಮ್ಮ ಹಾಗೂ ಹಂಪಮ್ಮ ಇದ್ದರು.

LEAVE A REPLY

Please enter your comment!
Please enter your name here