ಕೊಲೆಗಡುಕರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ.

0
92

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯನ್ನು ಖಂಡಿಸಿ ದೊಡ್ಡಬಳ್ಳಾಪುರ ದಲ್ಲಿ ಭುಗಿಲೆದ್ದ ಆಕ್ರೋಶ.
ಸಿಪಿಐಎಂ,ಕನ್ನಡಪಕ್ಷ, ಕರವೇ ಇನ್ನಿತರೆ ಎಲ್ಲಾ ಪ್ರಗತಿಪರ,ಕನ್ನಡಪರ ಸಂಘಟನೆಗಳಿಂದ ನಗರದ (ಸಿದ್ದಲಿಂಗಯ್ಯ ವೃತ್ತ) ಹಳೇ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೊಲೆಗಡುಕರನ್ನು ಬಂಧಿಸಿ ಕಠಿನ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯ ಮಾಡಿದ ಹೋರಾಟಗಾರರು ಮತ್ತು ಸ್ಥಳೀಯ ಪತ್ರಕರ್ತರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ,ತಾಲೂಕು ಕಚೇರಿ ಮುಂದೆ ಜಮಾಯಿಸಿ ಆಡಳಿತ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಿದ್ದೆಯಲ್ಲಿರುವ ಸರ್ಕಾರ ಕೂಡಲೇ ಎಚ್ಚೆತ್ತು ಕೊಲರಗಡುಕರನ್ನು ಬಂಧಿಸಿ ಮಾನವತಾವಾದಿ,ಚಿಂತಕಿ,ಪತ್ರಕರ್ತೆ,ಹೋರಾಟಗಾರ್ತಿ ಗೌರಿಲಂಕೇಶ್ಗೆ ನ್ಯಾಯ ಕೊಡಿಸಿವಂತೆ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೋಹನ್ ರವರಿಗೆ ಮನವಿ ಪತ್ರಸಲ್ಲಿಸಿದರು.

LEAVE A REPLY

Please enter your comment!
Please enter your name here