ಅಪರ ಜಿಲ್ಲಾಧಿಕಾರಿಯಾಗಿ ಸೋಮಶೇಖರ ಅಧಿಕಾರ ಸ್ವೀಕಾರ

0
149

ಬಳ್ಳಾರಿ,/ ಬಳ್ಳಾರಿ ಅಪರ ಜಿಲ್ಲಾಧಿಕಾರಿಯಾಗಿ
ಎಸ್.ಜಿ.ಸೋಮಶೇಖರ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

ಈ ಮುಂಚೆ ಅವರು ಮೈಸೂರಿನಲ್ಲಿ ಅಪರ ಪ್ರಾದೇಶಿಕ ಆಯುಕ್ತರಾಗಿ ಕರ್ತವ್ಯ
ನಿರ್ವಹಿಸುತ್ತಿದ್ದರು. ಪ್ರಭಾರ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ
ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಚೇರಿಯಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಸೋಮಶೇಖರ ಅವರು ಯಾವುದೇ ಕಡತಗಳು ಕಚೇರಿಯಲ್ಲಿ ಬಾಕಿ ಇಟ್ಟುಕೊಳ್ಳಬೇಡಿ, ತಮ್ಮ ದೈನಂದಿನ ಕೆಲಸಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ
ಯಾವುದೇ ರೀತಿಯಲ್ಲಿ ಶೀಘ್ರಗತಿಯಲ್ಲಿ ಕೆಲಸ ಮಾಡಿಕೊಡಿ ಮತ್ತು ಈ ಮೂಲಕ
ಜನರ ವಿಶ್ವಾಸಗಳಿಸಿ ಎಂದು ಅವರು ಹೇಳಿದರು.
ತಹಸೀಲ್ದಾರ್ ವಿನೋದ ಮೆಹತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು
ಇದ್ದರು.

LEAVE A REPLY

Please enter your comment!
Please enter your name here