ಜಲಾವೃತ್ತಗೊಂಡ ರಸ್ತೆಗಳಲ್ಲಿ ಜನರ ಪರದಾಟದ

0
333

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಜಲಾವೃತ್ತಗೊಂಡ ರಸ್ತೆಗಳಲ್ಲಿ ಜನರ ಪರದಾಟದ ಜೊತೆಗೆ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದ ಘಟನೆ ನಗರದಲ್ಲಿ ಸಂಜೆ ಬಿದ್ದ ಭಾರಿ ಮಳೆಯಿಂದ ದಿಬ್ಬೂರಹಳ್ಳಿ ರಸ್ತೆಯ ಪದವಿಪೂರ್ವ ಕಾಲೇಜ್ ನಿಂದ ನ್ಯಾಯಾಲಯದವರೆಗೂ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಪ್ರಯಾಣಿಕರಿಗೆ ಹಾಗೂ ಆ ರಸ್ತೆಯ ಅಕ್ಕ ಪಕ್ಕದಲ್ಲಿ ಇರುವಂತ ಅಂಗಡಿ ಮತ್ತು ಮನೆಯವರಿಗೂ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.

ರಸ್ತೆಯ ಎರಡು ಕಡೆ ಚರಂಡಿಗಳಲ್ಲಿ ಕೊಳಕು ತುಂಬಿಕೊಂಡಿವುದರಿಂದ ಚರಂಡೀಲಿ ಹರಿಯುವ ನೀರು ರಸ್ತೆಯ ಮೇಲೆ ಹರಿಯುವಂತಾಗಿದೆ. ಇದರಿಂದ ಪ್ರತಿ ಸಲ ಮಳೆ ಬಂದಾಗ ಸುಮಾರು ನಾಲ್ಕೈದು ಅಡಿಳ ನೀರಲ್ಲಿ ಓಡಾಡುತ್ತಾ ಬಹಳಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ ಎಂದು ಸ್ಥಳಿಯರು ಆಕ್ರೋಶ ವ್ಯೆಕ್ತಪಡಿಸಿದರು.

ಇದಕ್ಕೆಲ್ಲಾ ಕಾರಣ ನಗರಸಭೆಯ ನಿರ್ಲಕ್ಷತನದಿಂದ ಚರಂಡಿಗಳು ಸರಿಯಾಗಿ ಸ್ವಚ್ಚತೆ ಮಾಡದಿರುವುದು ಹಾಗೂ ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳ ಮುಂಭಾಗ ಅಂಗಡಿ ಮಾಲಿಕರು ಕಲ್ಲು ಚಪ್ಪಡಿಗಳನ್ನು ಅಳವಡಿಸಿಕೊಂಡು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದಂತೆ ಮಾಡಿದ್ದಾರೆ.

ಇದರ ಬಗ್ಗೆ ನಗರಸಭೆ ಯಾವುದೇ ರೀತಿಯ ಕ್ರಮ ಅಂಗಡಿ ಮಾಲೀಕರ ಮೇಲೆ ಜರುಗಿಸದೆ ಇರುವುದರಿಂದಲೂ ಸಹ ಇಂದು ಮಳೆಯ ನೀರು ಮನೆಗಳಿಗೆ ನುಗ್ಗುವಂತಾಯಿತು ಎಂದರು.

ಇದೇ ರೀತಿ ನಗರದ ಅಶೋಕ ರಸ್ತೆಯಲ್ಲಿ ಹರಿಯುವಂತ ನೀರು ಶಾಮಣ್ಣ ಬಾವಿ ಕಡೆ ರಭಸವಾಗಿ ಹರಿಯುತ್ತಿದ್ದ ವೇಳೆ ಶಾಲಾ ಮಕ್ಕಳು ಹಾಗೂ ಪಾದಚಾರಿಗಳು ಆ ನೀರಿನಲ್ಲೆ ಸಾಗುವಂತಾಯಿತು. ಇದೇ ರೀತಿ ಹಲವಾರು ಕಡೆ ನೀರು ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡಲು ತೊಂದರೆಗಳು ಅನುಭವಿಸುವಂತ ಘಟನೆ ನಡೆಯಿತು.

LEAVE A REPLY

Please enter your comment!
Please enter your name here