ಶ್ರೀಗಳ ಭೇಟಿ ಬಳಿಕ ಬಿ.ಎಸ್ ವೈ.ಹೇಳಿಕೆ..

0
115

ತುಮಕೂರು: ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ..ಅವರು ಆರೋಗ್ಯ ವಾಗಿದ್ದಾರೆ ಎಂದು ಮಾದ್ಯಮ ದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ. ರಾಜ್ಯದಲ್ಲಿ ಕೊಲೆ ಸುಲಿಗೆ ಭ್ರಷ್ಟಾಚಾರ ಹೆಚ್ಚಾಗಿದೆ.ಇದೆಲ್ಲಾ ಕೊನೆ ಮಾಡಿ, ಮಾದರಿ ರಾಜ್ಯ ಮಾಡುವ ಆಸೆ ನನಗಿದೆ.ಶ್ರೀಗಳ ಆಶೀರ್ವಾದ ದಿಂದ ನನ್ನ ಕನಸು ಈಡೇರಲಿದೆ ಎಂದರು.

ಗೌರಿ‌ಲಂಕೇಶ್ ಹತ್ಯೆ:
ಆರೋಪಿಗಳು ಯಾರೇ ಆಗಿದ್ರು ಬಂಧಿಸಬೇಕು..
ಈ ಸಂಬಂಧ ತನಿಖೆ ಆಗುತಿದೆ ಶಂಕೆ ಇದ್ದವರನ್ನು ಪೊಲೀಸರು ಬಂಧಿಸ್ತಾರೆ.ಸಿದ್ದಗಂಗಾ ಮಠದಲ್ಲಿ ಮಾಜಿ ಸಿಎಂ ಬಿಎಸ್ ವೈ ಹೇಳಿಕೆ..

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ರವರು, ಆರೋಗ್ಯ ಸೇವೆ ಎಲ್ಲರಿಗೂ ಸಿಗುವಂತೆ ಸಿದ್ಧಗಂಗಾ ಮಠದ ವತಿಯಿಂದ ಅನುಕೂಲ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತುಮಕೂರು ನಗರದ ದೇವರಾಯಪಟ್ಟಣ ಕೆರೆಯಿಂದ ಸಿದ್ಧಗಂಗಾ ಮಠ ಹಾಗೂ ಸುತ್ತಮುತ್ತಲಿನ 3 ಹಳ್ಳಿಗಳಿಗೆ 20 mcft ನೀರನ್ನು ನೀಡುವ ಯೋಜನೆಗೆ ಶೀಘ್ರ ವೇ ಚಾಲನೆ ನೀಡಲಾಗುವುದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದರು.

ಈ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ. ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ಸಿಗಬೇಕು. ಸುಂದರ ಮತ್ತು ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಸಿದ್ಧಗಂಗಾ ಶ್ರೀ ಗಳ ಕೊಡುಗೆ ಅಪಾರ ಎಂದ ಅವರು ಹೇಳಿದರು

ಕೇಂದ್ರ ಕ್ಕೆ ಚಾಲನೆ ನೀಡಿ ಮಾತನಾಡಿದ ಗೌರವಾನ್ವಿತ ರಾಜ್ಯಪಾಲರಾದ ವಜುಭಾಯಿ ರುಡಾಭಾಯಿ ವಾಲಾ ಅವರು, ಭಾರತೀಯ ಸಂಸ್ಕೃತಿಯ ಜ್ಞಾನ ನೀಡುವುದು ಸಾಧುಸಂತರು. ಪ್ರಮಾಣಿಕವಾಗಿರುವವರು ಉತ್ತಮ ಕಾರ್ಯಕ್ರಮ ಗಳನ್ನು ಮಾಡುತ್ತಾರೆ. ಧರ್ಮದ ಬೋಧನೆ ಜತೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತಿತರ ಸೌಲಭ್ಯಗಳನ್ನು ನೀಡಿ ಕಾಯಕವೇ ಕೈಲಾಸ ಎಂಬಂತೆ ಸ್ವಾಮೀಜಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು

250 ಹಾಸಿಗೆ ಗಳ ಕೇಂದ್ರ ವಾಗಿದ್ದು, ಆತ್ಯಾಧುನಿಕ ಸೌಲಭ್ಯಗಳು ಜನರಿಗೆ ಸಿಗಲಿದೆ. ಸಿದ್ಧಗಂಗಾ ಶ್ರೀ ಗಳ ತತ್ವ ಮತ್ತು ಆದರ್ಶ ಗಳಿಂದ ಪ್ರೇರಣೆ ಪಡೆದು ಕಾಯಕ ಯೋಗಿ ಗಳಾಗೋಣ ಎಂದು ಕರೆ ನೀಡಿದರು.

LEAVE A REPLY

Please enter your comment!
Please enter your name here