ದರೋಡೆಕೋರರ ಮೇಲೆ ಫೈರಿಂಗ್….

0
65

ಬೆಂಗಳೂರು/ಮಹದೇವಪುರ:- ಬಂಧನಕ್ಕೆ ತೆರಳಿದ್ದ ಪೊಲೀಸರನ್ನೇ ಥಳಿಸಿದ ಇಬ್ಬರು ದರೋಡೆಕೋರರ ಮೇಲೆ ಫೈರಿಂಗ್ ಮಾಡಲಾಗಿದೆ.

ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕ ನಾಯಕನಹಳ್ಳಿ ನೀಲಗಿರಿ ತೋಪಿನಲ್ಲಿ ಕಳೆದ ತಡ ರಾತ್ರಿ ಘಟನೆ ನಡೆದಿದೆ. ದರೋಡೆಕೋರರಾದ ಅಮರ್ ಮತ್ತು ಮುಜಾಮಿಲ್ ಅವರಿಗೆ ಗುಂಡೇಟು ಬಿದ್ದಿದ್ದು, ಸರ್ಜಾಪುರದ ಆಸ್ಪತ್ರೆಗೆ ಸೇರಿಸಲಾಗಿದೆ.

ರಾತ್ರಿ 11.30 ಕ್ಕೆ ಸರ್ಜಾಪುರದಲ್ಲಿ ಆನಂದ್ ಎಂಬುವವರನ್ನು ಅಡ್ಡಗಟ್ಟಿದ್ದ ಅಮರ್, ಮುಜಾಮಿಲ್ ಹಣ, ಮೊಬೈಲ್ ದರೋಡೆ ಮಾಡಿದ್ದಾರೆ.

ಆನಂದ್ ಬೆಳ್ಳಂದೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ನೀಲಗಿರಿ ತೋಪಿನ ಬಳಿ ಆರೋಪಿಗಳಿರುವುದನ್ನು ತಿಳಿದು ಬಂಧಿಸಲು ಮುಂದಾಗಿದ್ದು, ಆಗ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಆತ್ಮರಕ್ಷಣೆಗೆ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಫೈರಿಂಗ್ ಮಾಡಿದ್ದಾರೆ. ಪೇದೆ ಮುನಿರಾಜು ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

LEAVE A REPLY

Please enter your comment!
Please enter your name here