ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದಿಂದ ಸುದ್ದಿಗೋಷ್ಟಿ

0
151

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ಜೆಡಿಎಸ್ ಕೂಡಾ ಮೈಕೋಡವಿಕೊಂಡು ಎದ್ದಂತಿದೆ. ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಲ್ಪಸಂಖ್ಯಾತ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ರೋಷನ್ ಅಬ್ಬಾಸ್ ಮಾತನಾಡಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕೇವಲ ಜೆಡಿಎಸ್ ಪಕ್ಷದ ಆಡಳಿತದಿಂದ ಮಾತ್ರ ಸಾಧ್ಯ, ರೈತರು, ಬಡವರು ಹಾಗೂ ದೀನ ದಲಿತರ ಅಭಿವೃದ್ಧಿ ಕುಮಾರಸ್ವಾಮಿ ಯವರಿಂದಲೇ ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡ ಬೇಕೆಂದು ಹೇಳಿದರು.
ಇನ್ನು ರಾಜ್ಯ ವಕ್ತಾರ ತನ್ವೀರ್ ಮಾತನಾಡಿ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಭಿನ್ನಮತ ಸೃಷ್ಟಿಸದೆ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿಯನ್ನು ಸಿಎಂ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ, ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಮೇಲಿನ ನಂಬಿಕೆ ಕಳೆದು ಕೊಂಡಿರುವ ಜನಸಾಮಾನ್ಯರು ಪ್ರಾದೇಶಿಕ ಪಕ್ಷ ಜೆಡಿಎಸ್ ನತ್ತ ಒಲವು ತೋರಿಸುತ್ತಿದ್ದು ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಯಾಗುವುದನ್ನು ಬಯಸುತ್ತಿದ್ದಾರೆ.ಪಕ್ಷ ಎಂದರೆ ಒಂದು ಸಂಘನೆಯಂತೆ ಪರಿಗಣಿಸಿ ಪ್ರತಿಯೊಬ್ಬ ಕಾರ್ಯಕರ್ತನೂ ಒಬ್ಬ ಹೋರಾಟಗಾರರಂತೆ ಚುನಾವಣೆಗೆ ಅಣಿಯಾಗಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

LEAVE A REPLY

Please enter your comment!
Please enter your name here