ಮಾತೃಪೂರ್ಣ ಯೋಜನೆ ಜಾರಿಗೆ.

0
201

ಬಳ್ಳಾರಿ /ಬಳ್ಳಾರಿ ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಠಿಕ ಬಿಸಿಯೂಟದ ಬಾಗಿನ ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿನ ಅಪೌಷ್ಠಿಕತೆ ಹೊಗಲಾಡಿಸುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮಧ್ಯಾಹ್ನ ಪೌಷ್ಠಿಕಯುಕ್ತ ಬಿಸಿಯೂಟ ನೀಡಲು ಸರಕಾರ ನಿರ್ಧರಿಸಿದೆ.

ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಸಮಗ್ರ ಶಿಶು
ಅಭಿವೃದ್ಧಿ ಯೋಜನೆಯ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದ ಅಡಿಯಲ್ಲಿ ಗರ್ಭಿಣಿ
ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ
ಕೇಂದ್ರಗಳಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಅವರಿಗೆ ಕೊಡಲ್ಪಡುವ
ವೈಶಿಷ್ಟಪೂರ್ಣ ಯೋಜನೆಯಾಗಿದ್ದು, ಊಟದ ನಂತರ ಸ್ಥಳದಲ್ಲಿಯೇ ಕಬ್ಬಿಣಾಂಶದ
ಮಾತ್ರೆಯನ್ನು ಸೇವಿಸಲು ಬೆಂಬಲ ನೀಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ
ಇದಕ್ಕೆ ಸರಕಾರ “ಮಾತೃಪೂರ್ಣ ಯೋಜನೆ’’ ಎಂದು ಹೆಸರಿಟ್ಟಿದೆ. ಈ ಮಹತ್ವಾಕಾಂಕ್ಷಿ
ಕಾರ್ಯಕ್ರಮ ಮಹಾತ್ಮಾಗಂಧೀಜಿ ಅವರ ಜಯಂತಿ ದಿನವಾದ ಅ.2ರಂದು ಬಳ್ಳಾರಿ
ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.
ಬಳ್ಳಾರಿ ಜಿಲ್ಲೆಯಲ್ಲಿ 2393 ಅಂಗನವಾಡಿ ಕೇಂದ್ರಗಳಲ್ಲಿ ಈ ಯೋಜನೆ
ಅನುಷ್ಠಾನಗೊಳ್ಳಲಿದ್ದು, 61706 ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳ
ಮೂಲಕ ಈ ಯೋಜನೆ ಅಡಿ ಮಧ್ಯಾಹ್ನ ಪೌಷ್ಠಿಕ ಬಿಸಿಯೂಟ ಒದಗಿಸಲಾಗುತ್ತಿದೆ. ಪ್ರತಿ
ಗರ್ಭಿಣಿ/ಬಾಣಂತಿಯರಿಗೆ ಪ್ರತಿ ದಿವಸ ರೂ.21ರಂತೆ ಘಟಕ ವೆಚ್ಚದಲ್ಲಿ ಆಹಾರ
ಒದಗಿಸಲಾಗುತ್ತಿದೆ.
ಅ.2ರಂದು ಈ ಯೋಜನೆ ಅನುಷ್ಠಾನಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ
ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹಾಗೂ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು
ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಹಾಗೂ ಜಿಲ್ಲಾಮಟ್ಟದ
ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದರು. ಇದುವರೆಗೆ ಕೈಗೊಳ್ಳಲಾಗಿರುವ
ಕ್ರಮಗಳ ಕುರಿತು ಪರಿಶೀಲಿಸಿದರು.
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಅಂಗನವಾಡಿ
ಕೇಂದ್ರಗಳಿಗೆ ಬರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಗುಣಮಟ್ಟದ ಆಹಾರ ಒದಗಿಸಬೇಕು;
ಈ ವಿಷಯದಲ್ಲಿ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು
ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಅವರು ಹೇಳಿದರು.
ಜನರಿಗೆ ಈ ಯೋಜನೆ ಕುರಿತು ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು ಮತ್ತು ಅದರ ಅಗತ್ಯತೆ
ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ ಅವರು, ಗ್ರಾಪಂಗಳಲ್ಲಿ ಪಿಡಿಒಗಳು
ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜತೆಗೂಡಿ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡುವ
ಕೆಲಸ ಮಾಡಬೇಕು ಎಂದರು.
ಬಾಲವಿಕಾಸ ಸಮಿತಿಗೆ ಜವಾಬ್ದಾರಿ ವಹಿಸಿ: ಈ ಸಮಿತಿಯಲ್ಲಿ ಒಟ್ಟು 13 ಜನ ಸದಸ್ಯರಿದ್ದು,
ಪ್ರತಿಯೊಬ್ಬ ಸದಸ್ಯರಿಗೂ ಇಬ್ಬರು ಗರ್ಭಿಣಿ/ಬಾಣಂತಿಯರಿಗೆ ಪ್ರತಿ ದಿವ¸ ಅಂಗನವಾಡಿ
ಕೇಂದ್ರಗಳಿಗೆ ಕರೆದುಕೊಂಡು ಬಂದು ಪೌಷ್ಠಿಕ ಆಹಾರ ಸೇವಿಸುವ ನಿಟ್ಟಿನಲ್ಲಿ
ಜವಾಬ್ದಾರಿಯನ್ನು ವಹಿಸಬೇಕು ಎಂದು ಡಿಸಿ ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಆ ಸಮಿತಿ ಸದಸ್ಯರು ತಮಗೆ ವಹಿಸಲಾದ ಜವಾಬ್ದಾರಿಯನ್ನು ಸಮರ್ಪಕವಾಗಿ
ನಿಭಾಯಿಸಬೇಕು ಎಂದು ಹೇಳಿದ ಅವರು, ಇವರಿಗಾಗಿಯೇ ಪ್ರತ್ಯೇಕ ರಿಜಿಸ್ಟರ್ ಮಾಡಿ
ಎಂದರು. ಈ ಯೋಜನೆ ಪರಿಣಾಮಕಾರಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಂಗನವಾಡಿ
ಕಾರ್ಯಕರ್ತೆಯರು ಮತ್ತು ಸಹಾಯಕರ ಜವಾಬ್ದಾರಿ ಮಹತ್ವದ್ದಾಗಿದ್ದು, ಅವರು ಸರಿಯಾಗಿ
ಕೆಲಸ ಮಾಡಬೇಕು ಎಂದರು.
ಮುಖ್ಯವಾಗಿ ಹೆರಿಗೆ ಸಮುಯದಲ್ಲಿ ಗರ್ಭಿಣಿ ತಾಯಂದಿರು ಹಾಗೂ ಶಿಶುಗಳ ಮರಣ
ಪ್ರಮಾಣ ತಡೆಗಟ್ಟುವುದು, ಈ ಒಂದು ಪೂರ್ಣ ಪೌಷ್ಠಿಕ ಬಿಸಿಯೂಟ ಕಾರ್ಯಕ್ರಮ
ಅನುಷ್ಠಾನದ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಉತ್ತಮ ಆರೋಗ್ಯ ಬೆಳವಣಿಗೆ
ಮೂಲಕ ರಕ್ತಹೀನತೆ ಕಡಿಮೆಗೊಳಿಸುವುದು, ಕಡಿಮೆ ತೂಕದ ಶಿಶುಗಳ ಜನನ
ನಿಯಂತ್ರಿಸುವುದು ಈ ಯೋಜನೆ ಪ್ರಮುಖ ಉದ್ದೇಶವಾಗಿದೆ ಎಂದು ಡಿಸಿ ರಾಮ್ ಪ್ರಸಾತ್
ಅವರು ವಿವರಿಸಿದರು.
ಮಾತೃಪೂರ್ಣ ಯೋಜನೆಗೆ ತಾಯಿ ಕಾರ್ಡ್ ಜೋಡಿಸಿರುವ ಕುರಿತು ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವುದಾಗಿ
ತಿಳಿಸಿದ ಡಿಸಿ ಅವರು, ಮಾತೃಪೂರ್ಣ ಯೋಜನೆಗಾಗಿಯೇ ಪ್ರತ್ಯೇಕ ಕಾರ್ಡ್ ಆದ್ರೇ
ಅನುಕೂಲ ಎಂದರು.
ಗರ್ಭಿಣಿಯೆಂದು ಗೊತ್ತಾದ ಕೂಡಲೇ ಅಂಗನವಾಡಿ ಕೇಂದ್ರಗಳಲ್ಲಿ ಹೆಸರು ನೋಂದಣಿ
ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ
ರಾಜಾನಾಯ್ಕ ತಿಳಿಸಿದರು.
*ಪೂರ್ಣ ಪೌಷ್ಠಿಕ ಬಿಸಿಯೂಟದೊಂದಿಗೆ ಏನೇನಿರುತ್ತೇ..?: ಅನ್ನ, ಸಾಂಬರ,ಪಲ್ಯದ ಜೊತೆಗೆ
ಬೇಯಿಸಿದ ಮೊಟ್ಟೆ ಮತ್ತು 200 ಮಿ.ಲಿ ಹಾಲು,ಚಿಕ್ಕಿ ಒಳಗೊಂಡಿದ್ದು, ತಿಂಗಳಿಗೆ
25ದಿನಗಳಂತೆ ವರ್ಷದಲ್ಲಿ ಒಟ್ಟು 300 ದಿನಗಳು ನೀಡಲಾಗುವುದು. ಮೊಟ್ಟೆ ತಿನ್ನದವರಿಗೆ
ಮೊಳಕೆ ಬರಿಸಿದ ಕಾಳು ಕೊಡಲಾಗುತ್ತದೆ. ಇದರಿಂದ ಗರ್ಭಿಣಿ ಮತ್ತು ಹಾಲುಣಿಸುವ
ತಾಯಂದಿರಿಗೆ ಒಂದು ದಿನಕ್ಕೆ ಬೇಕಾಗುವ ಪ್ರೋಟಿನ್ ಕ್ಯಾಲರಿ ಮತ್ತು ಕ್ಯಾಲ್ಸಿಯಂ ಅಂಗಳು
ಸುಮಾರು ಶೇ.40-45ರಷ್ಟು ಈ ಒಂದು ಪೂರ್ಣ ಪೌಷ್ಠಿಕ ಬಿಸಿಯೂಟದಿಂದ
ಒದಗಿಸಲಾಗುತ್ತದೆ.
*ಫಲಾನುಭವಿಗೆ ನೀಡುವ ಪೌಷ್ಠಿಕ ಆಹಾರದ ವಿವರ: 150 ಗ್ರಾಂ ಅಕ್ಕಿ, 30 ಗ್ರಾಂ ತೊಗರಿ
ಬೆಳೆ, 16ಗ್ರಾಂ ಎಣ್ಣೆ, 200ಎಂಎಲ್ ಹಾಲು, ಒಂದು ಮೊಟ್ಟೆ, 50 ಗ್ರಾಂ ತರಕಾರಿ, ಬೆಲ್ಲ
ಹಾಗೂ ಕಡಲೆಯಿಂದ ಮಾಡಿದ ಚಿಕ್ಕಿ, ಅಗತ್ಯ ಅನುಸಾರ ಮಸಾಲ ಪದಾರ್ಥಗಳು.

LEAVE A REPLY

Please enter your comment!
Please enter your name here