ಶಾಲೆಯ ದುಸ್ಥಿತಿ ನೋಡೋರೇ ಇಲ್ವೇ.?

0
213

ಕಲಬುರ್ಗಿ/ ಅಫಜಲಪೂರ:ತಾಲ್ಲೂಕಿನ ಕರಜಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಂಗಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಮಕ್ಕಳು ಇದ್ದು ಈ ಶಾಲೆಗೆ ಹೇಳುವುರೂಲ್ಲಾ ಕೇಳುವರಂತೂ ಇಲ್ಲವೇ ಇಲ್ಲ.

ಆದರೆ ಈ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾದ್ದರೆ ಶಿಕ್ಷಕರೆ ಇಲ್ಲದಂತೆ ಆಗಿದೆ.
ಶಿಕ್ಷಕರು ಮಧ್ಯಾಹ್ನದ ನಂತರ ಶಾಲೆಗೆ ರಜೆ ನೀಡುತ್ತಿದ್ದಾರೆ.
ಈ ಕುರಿತು ಹಲವಾರು ಬಾರಿ ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬೌರಮ್ಮ ಮಹದೇವಗೌಡ ಕರೊಟಿ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿಚಾರಿಸಿ ಮತ್ತು ಗ್ರಾಮಸ್ಥರು ಸೇರಿಕೊಂಡು ಮನವಿ ಪತ್ರ ಸಲ್ಲಿಸಿದ್ದರು ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರ ಪುತ್ರ ಬಸುಗೌಡ ಕರೂಟಿ ಅವರು ಮಾಧ್ಯಮದವರ ಮುಂದೆ ತಿಳಿಸಿದ್ದರು.
ಈ ಕುರಿತು ಶೀಘ್ರದಲ್ಲಿ ಶಾಲೆಯ ಸಮಸ್ಯೆ ಬಗೆಹರಿಸದ್ದಿದ್ದರೆ .ಗ್ರಾಮಸ್ಥರು ಸೇರಿಕೊಂಡು ಪ್ರತಿಭಟನೆ ನಡೆಸುತ್ತೆವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here