ಬಳ್ಳಾರಿ/ ಬಳ್ಳಾರಿ:ವಿವಿಧ ಕಾರ್ಯ ನಿಮಿತ್ತ ಬಳ್ಳಾರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೆಲದಲ್ಲಿಯೇ ಕುಳಿತು ಜನರ ಅಹವಾಲು ಆಲಿಸಿದರು.
ನಿನ್ನೆ ರಾತ್ರಿ ಸರ್ಕಾರಿ,9.30ಗಂಟೆ ಸಮಯದಲ್ಲಿ ಅತಿಥಿಗೃಹಕ್ಕೆ ಮಹಾನಗರ ಪಾಲಿಕೆ ವ್ಯಾಪ್ತಿಯ 26ನೇ ವಾರ್ಡಿನ ಮಹಿಳೆಯರು ಸಚಿವರನ್ನು ಭೇಟಿ ಆಗಿ ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು.
ತಮ್ಮ ವಾರ್ಡಿನಲ್ಲಿ 125 ಕ್ಕೂ ಅಧಿಕ ಜನರಿಗೆ ನಿವೇಶನಗಳು ಇಲ್ಲ. ತಮ್ಮ ವಾರ್ಡಿನಲ್ಲಿ ವಾಸಿಸುವ ಅನೇಕ ಜನರಿಗೆ ಹಕ್ಕು ಪತ್ರಗಳನ್ನು ನೀಡುವಂತೆ ಮನವಿ ಮಾಡಿದರು.
ಮಹಿಳೆಯರ ನೋವುಗಳಿಗೆ ಸ್ಪಂದಿಸಿದ ಸಚಿವ ಲಾಡ್ ನೆಲದಲ್ಲಿಯೇ ಕುಳಿತು ಮಹಿಳೆಯರ ನೋವನ್ನು ಆಲಿಸಿದರು. ಸ್ಥಳದಲ್ಲಿಯೇ ಪಾಲಿಕೆ ಆಯುಕ್ತರು ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಮಹಿಳೆಯರ ಸಮಸ್ಯೆಗಳು ಮರುಕಳಿಸದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.