ಪ್ರಧಾನಿ ಮುಂದೆ ಬಿಜೆಪಿ ನಾಯಕರಿಗೆ ನಿಲ್ಲಲು ದೈರ್ಯವಿಲ್ಲ..?

0
187

ಬೆಂಗಳೂರು/ಮಹದೇವಪುರ:– ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್ ಗಳ ಮೂಲಕ ನಮ್ಮ ರೈತರು ಪಡೆದಿರುವ ಸಾಲ ಮನ್ನಾ ಮಾಡಿ ಎಂದು ಪ್ರಧಾನಿಯವರ ಮುಂದೆ ನಿಂತು ಹೇಳಲು ರಾಜ್ಯ ಬಿಜೆಪಿ ನಾಯಕರಿಗೆ ಮೀಟರ್ (ಧೈರ್ಯ) ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರ ಸಾಲ ಮನ್ನಾ ಮಾಡಿ ಎಂದು ಮನವಿ ಮಾಡಲು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಯವರನ್ನು ಭೇಟಿ ಮಾಡಿದಾಗ ಬಿಜೆಪಿ ನಾಯಕರು ಬಾಯಿ ಬಿಡಲೇ ಇಲ್ಲ.
ಆದರೆ ನಾವು ಸಹಕಾರ ಬ್ಯಾಂಕ್ ಗಳ ಮೂಲಕ 22.27 ಲಕ್ಷ ರೈತರ ಸಾಲವನ್ನು 50 ಸಾವಿರ ರೂ.ಗಳವರೆಗೆ ಮನ್ನಾ ಮಾಡಿದ್ದೇವೆ. ಇದಕ್ಕಾಗಿ 8165 ಕೋಟಿ ರೂ. ವೆಚ್ವ ಮಾಡಿದ್ದೇವೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಮೋದಿಯವರಿಗೆ ಹೇಳಿ ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್ ಗಳ ಮೂಲಕ ರೈತರು ಪಡೆದಿರುವ 42 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಿಸಲಿ ಎಂದು ಸಿಎಂ ಸವಾಲು ಹಾಕಿದರು. ಇಲ್ಲದಿದ್ದರೆ ಯಡಿಯೂರಪ್ಪ ಅವರನ್ನು ರೈತ ವಿರೋಧಿ ಎನ್ನಬೇಕಾಗುತ್ತದೆ ಎಂದರು.
ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಿಜೆಪಿಯವರು ವೀರಾವೇಶದ ಮಾತುಗಳನ್ನಾಡಿದ್ದರು. ಈಗ ತೆಪ್ಪಗಾಗಿದ್ದಾರೆ.
ಯಡಿಯೂರಪ್ಪ ಡೋಂಗಿ ರಾಜಕಾರಣಿ. ಮುಖ್ಯಮಂತ್ರಿ, ಮಂತ್ರಿಗಳ ವಿರುದ್ಧ ಅವರು ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಾರಂತೆ. ಅದಕ್ಕೆ ಮಹೂರ್ತ ಏತಕ್ಕೆ ಹುಡುಕಬೇಕು.
ಯಡಿಯೂರಪ್ಪ ಅವರೇ ವಿವಿಧ ಕೇಸುಗಳಲ್ಲಿ ಸಿಲುಕಿ ನೀವೇ ಕಷ್ಟದಲ್ಲಿ ಇದ್ದೀರಿ. ಜೈಲಿಗೆ ಬೇರೆ ಹೋಗಿ ಬಂದಿದ್ದೀರಿ. ಹೀಗಿರುವಾಗ ನಮ್ಮ ಮೇಲೆ ಯಾವ ಚಾರ್ಜ್ ಶೀಟ್ ಹಾಕುವಿರಿ.
ನಮ್ಮ ಸರ್ಕಾರ ಒಂದೇ ಒಂದು ಹಗರಣ ಮಾಡಿಲ್ಲ, ಭ್ರಷ್ಟಾಚಾರದ ಆರೋಪಗಳಿಲ್ಲ, ನಮ್ಮ ಪಕ್ಷದ ಕಾರ್ಯಕರ್ತರು ಎದೆಯುಬ್ಬಿಸಿ ಓಡಾಡುವ ಕೆಲಸ ಮಾಡಿದ್ದೇವೆಯೇ ಹೊರತು ಅವರು ತಲೆ ತಗ್ಗಿಸುವ ಕಾರ್ಯ ಮಾಡಿಲ್ಲ.
ಬಿಜೆಪಿಯವರು ಮಹಾನ್ ಸುಳ್ಳುಗಾರರು. ಅವರ ಮಾತುಗಳನ್ನು ನಂಬಬೇಡಿ. ಸರ್ಕಾರಕ್ಕೆ ಮತ್ತೆ ಆಶೀರ್ವಾದ ಮಾಡಿ. ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಎಂದು ಜನರನ್ನು ಕೇಳಿಕೊಳ್ಳಿ ಎಂದು ಮುಖ್ಯಮಂತ್ರಿಯವರು ಕಾರ್ಯಕರ್ತರನ್ನು ಕುರಿತು ಹೇಳಿದರು.

ವಿಮಾನ ಪ್ರಯಾಣ, ವಿದೇಶ ಪ್ರವಾಸ, ಮನ್ ಕೀ ಬಾತ್ ಇದು ಪ್ರಧಾನಿ ಮೋದಿಯವರ ಮೂರೂವರೆ ವರ್ಷದ ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಹದೇವಪುರದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಿಸಿದ ಬಳಿಕ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಮೋದಿಯವರದ್ದು ಕೇವಲ ಮನ್ ಕೀ ಬಾತ್. ಆದರೆ ನಮ್ಮದು ಕಾಮ್ ಕೀ ಬಾತ್. ನಾವು ಮಾತನಾಡುವುದಿಲ್ಲ. ನಮ್ಮ ಸರ್ಕಾರದ ಸಾಧನೆಗಳು ಮಾತನಾಡುತ್ತವೆ ಎಂದು ಸಿಎಂ ತಿಳಿಸಿದರು.
ಪ್ರಧಾನಿ ಮೋದಿಯವರು ಅಚ್ಛೇ ದಿನ್ ಆಯೇಗಾ ಎಂದರು. ಅಚ್ಛೇ ದಿನ್ ಕಬ್ ಆಯೇಗಾ ಮೋದಿ ಅವರೇ, ಮಾಲೂಮ್ ನಹೀ ಎಂದು ವ್ಯಂಗ್ಯವಾಡಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಿಜೆಪಿಯ ಮೂಲ‌ಮಂತ್ರ. ಆದರೆ ಕಳೆದ ಮೂರೂವರೆ ವರ್ಷದಲ್ಲಿ ಶ್ರೀಮಂತರು, ಬಂಡವಾಳಶಾಹಿಗಳು, ಕಾರ್ಪೊರೇಟ್ ಕಂಪನಿಗಳ ವಿಕಾಸ ಆಯಿತೇ ಹೊರತು ಬಡವರು, ಮಧ್ಯಮ ವರ್ಗದವರದ್ದಲ್ಲ.
ನೋಟು ಅಮಾನ್ಯೀಕರಣದಿಂದ ಜನರಿಗೆ ಆದ ಅನುಕೂಲವೇನು ? ಇದರಿಂದ ಕಪ್ಪು ಹಣದ ನಿರ್ಮೂಲನೆ ಆಗುತ್ತದೆ. ಉಗ್ರರ ಅಟ್ಟಹಾಸ ಮಟ್ಟ ಹಾಕುತ್ತೇವೆ. ನಕಲಿ ನೋಟುಗಳನ್ನು ಪತ್ತೆ ಮಾಡುತ್ತೇವೆ. ಇನ್ನೂ ಏನೇನೋ ಆಗಿ ಹೋಗುತ್ತದೆ ಎಂದಿದ್ದರು ಮೋದಿಯವರು.
ಆದರೆ, ಆಗಿದ್ದೇನು ? ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಂತು 120ಕ್ಕೂ ಹೆಚ್ಚು ಮಂದಿ ಬಡವರು, ಸಣ್ಣ ವ್ಯಾಪಾರಿಗಳು, ರೈತರು, ಮಧ್ಯಮ ವರ್ಗದವರು ಸತ್ತರೇ ಹೊರತು ಶ್ರೀಮಂತರಲ್ಲ.
ಅಧಿಕಾರಕ್ಕೆ ಬಂದ ನೂರು ದಿನದೊಳಗೆ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಎಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ಹಾಕುವುದಾಗಿ ಹೇಳಿದ್ದು ನೆನಪಿಲ್ಲವೇ ಮೋದಿಯವರೇ ? ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಜನ್ ಧನ್ ಯೋಜನೆ ಠುಸ್ ಆಗಿದೆ. ಮೋದಿ ಅವರದ್ದು ಯು ಟರ್ನ್ ಸರ್ಕಾರ. ಜಿಎಸ್ ಟಿ, ಎಫ್ ಡಿ ಐ, ಆಧಾರ್ ಯೋಜನೆಯನ್ನು ಮುಖ್ಯಮಂತ್ರಿ ಆಗಿದ್ದಾಗ ಮೋದಿಯವರು ವಿರೋಧ ಮಾಡಿದ್ದರು. ಆದರೆ ಈಗ ಆ ಯೋಜನೆಗಳನ್ನೇ ಅಪ್ಪಿಕೊಂಡಿದ್ದಾರೆ.
ಮೋದಿಯವರು ಪ್ರಧಾನಿಯಾದ ಬಳಿಕ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಇದು ಜನ ಸಾಮಾನ್ಯರ ಪರವಾದ ಕ್ರಮವೇ ? ಎಂದರು.
ಇನ್ನು ಸ್ವಚ್ಛ ಭಾರತ ಯೋಜನೆಯಲ್ಲಿ ಪೊರಕೆ ಹಿಡಿದು ಫೋಟೊಗೆ ಪೋಸು ಕೊಟ್ಟಿದ್ದು ಬಿಟ್ಟರೆ ಆಗಿದ್ದೇನೂ ಇಲ್ಲ ಎಂದರು.
ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಕಳೆದ ನಾಲ್ಕು ವರ್ಷದಿಂದ ಅಧಿಕಾರ ನಡೆಸುತ್ತಿದೆ.
ಚುನಾವಣೆ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಗಳ ಪೈಕಿ 155 ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಜನರಿಗೆ ಕೊಟ್ಟ ಭರವಸೆಗಳನ್ನು ನೂರಕ್ಕೆ ನೂರರಷ್ಟು ಈಡೇರಿಸುವ ಕೆಲಸವನ್ನು ಯಾವ ಸರ್ಕಾರವೂ ಮಾಡಿಲ್ಲ.
ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಸರ್ಕಾರದ ಸಾಧನೆಗಳನ್ನು ಒಳಗೊಂಡ ಕಿರುಹೊತ್ತಗೆಯನ್ನು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು.
ಜನತೆಗೆ ಕೊಟ್ಟ ಮಾತಿನ ಪ್ರಕಾರ ನಮ್ಮ ಸರ್ಕಾರ ನಡೆದುಕೊಂಡಿದೆ. ಹೀಗಾಗಿ ನಮ್ಮ ಸರ್ಕಾರಕ್ಕೆ ಮತ್ತೆ ಆಶೀರ್ವಾದ ಮಾಡಿ ಎಂದು ನಮ್ಮ ಕಾರ್ಯಕರ್ತರು ಜನರಲ್ಲಿ ಮನವಿ ಮಾಡಬೇಕು.
ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಇದೇ ಮೊದಲ ಬಾರಿಗೆ ನೇಮಕ ಮಾಡಲಾಗಿದೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ ಇದು ಉಪಯುಕ್ತ ಕೆಲಸ.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಬಗ್ಗೆ ನಮ್ಮ ಕಾರ್ಯಕರ್ತರು ಎಚ್ಚರ ವಹಿಸಬೇಕು.
ಕಾಂಗ್ರೆಸ್ ಕಾರ್ಯಕರ್ತರು ಸುಳ್ಳು ಹೇಳುವ ಅಗತ್ಯವಿಲ್ಲ. ನಮ್ಮ ಸರ್ಕಾರ ಏನು ಮಾಡಿದೆ, ಸಾಧನೆಗಳೇನು ಎಂಬ ಸತ್ಯವನ್ನು ಜನತೆ ಮುಂದಿಟ್ಟರೆ ಸಾಕು.
ಸರ್ಕಾರದ ಸೌಲಭ್ಯಗಳು ನಮಗೆ ತಲುಪಿದೆ. ಮತ್ತೆ ನಾವು ನಿಮಗೇ ಆಶೀರ್ವಾದ ಮಾಡುತ್ತೇವೆ ಎಂದು ಮನೆ ಮನೆಗೆ ಭೇಟಿ ನೀಡಿದಾಗ ಜನ ಹೇಳಿದರು.
ಅಕ್ಟೋಬರ್ ವೇಳೆಗೆ ಇನ್ನೂ 15 ಲಕ್ಷ ಜನರನ್ನು ಅನ್ನಭಾಗ್ಯ ಯೋಜನೆ ವ್ಯಾಪ್ತಿಗೆ ತರಲಾಗುವುದು. ಈ ಮೂಲಕ ನಾಲ್ಕು ಕೋಟಿ ಜನರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ.
ಇದಲ್ಲದೆ, ಕ್ಷೀರಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಲ್ಲಿ ಆ ಜಾತಿ ಈ ಜಾತಿ ಎಂಬುದಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದರು.

ಇದೇ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ” ಪರಮೇಶ್ವರ್, ಕೆಪಿಸಿಸಿ ಕಾರ್ಯದ್ಯಕ್ಷ ದಿನೇಶ್ ಗುಂಡೂರಾವ್, ಗೃಹ ಸಚಿವ ರಾಮಲಿಂಗಾ ರೆಡ್ಡಿ, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಡಿ.ಕೆ ಶಿವಕುಮಾರ್, ರೋಷನ್ ಬೇಗ್, ಕಾರ್ಯಕಾರಣಿ ಸದಸ್ಯ ಕೆ ಹೆಚ್ ಮುನಿಯಪ್ಪ, ನಗರ ಜಿಲ್ಲಾ ಅಧ್ಯಕ್ಷ ಎಸ್ಟಿ ಸೋಮಶೇಖರ್, ಬೈರತಿ ಬಸವರಾಜ್, ಸ್ಥಳೀಯ ಪಾಲಿಕೆ ಸದಸ್ಯ ಉದಯ್ ಕುಮಾರ್,

LEAVE A REPLY

Please enter your comment!
Please enter your name here