ಕೃಷಿ ಸಚಿವರೇ ಇಲ್ಲೋಡಿ ರೈತರಿಗೆ ಆಗುತ್ತಿದೆ ಭಾರಿ ಅನ್ಯಾಯ…!

0
185

ಬಳ್ಳಾರಿ/ಬಳ್ಳಾರಿ:ಕೃಷಿ ಇಲಾಖೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಬೆಳೆ ಔಷಧಿ ಮಾರಾಟ ! ರೈತರಿಗೆ ಗುಣಮಟ್ಟದ ಬೀಜ ಗೊಬ್ಬರ ಔಷಧಿ ವಿತರಣೆ ಮಾಡೋಕೆ ರೈತ ಸಂಪರ್ಕ ಕೇಂದ್ರ ಸ್ಪಾಪನೆ ಮಾಡಲಾಗಿದೆ, ಆದ್ರೆ ರೈತ ಸಂಪರ್ಕ ಕೇಂದ್ರದಿಂದಲೇ ಅನ್ನದಾತರಿಗೆ ಅವಧಿ ಮೀರಿದ ಔಷಧಿ ಬೀಜಗಳನ್ನು ಮಾರಾಟ ಮಾಡಿ ಭಾರಿ ಅನ್ಯಾಯ ಮಾಡಲಾಗುತ್ತಿದೆ, ಹೌದು, ಸ್ವಂತ ಕೃಷಿ ಇಲಾಖೆ ಅಧಿಕಾರಿಗಳೆ ಶಾಮೀಲಾಗಿ ಅವಧಿ ಮೀರಿದ ಬೆಳೆಗಳ ಔಷಧಿಗಳನ್ನು ಮಾರಾಟ ಮಾಡುತ್ತಿರುವುದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ, ಬಳ್ಳಾರಿ ತಾಲೂಕಿನ ಕೊಳೂರು ರೈತ ಸಂಪರ್ಕ ಕೇಂದ್ರದಲ್ಲಿ ಅವಧಿ ಮೀರಿದ ಅಪಾರ ಪ್ರಮಾಣದ ಬೆಳೆ ಔಷಧಿಗಳನ್ನು ರೈತರು ಪತ್ತೆ ಹಚ್ಚಿದ್ದಾರೆ, ಹತ್ತಿ ಮೆಣಸಿನಕಾಯಿ ಭತ್ತಕ್ಕೆ ಸಿಂಪಡಿಸುವ ಔಷಧಿಗಳಾದ ಮಲ್ಟಿಪೆಕ್ಸ್, 

ಸಿಂದೂರಿ, ಮೈಕ್ರೋ ಪಾಕ್ಟ್, ರಾಕೆಟ್, ಪಾರಿಸ್-
ಪಾಸ್ಮೋಮಿಕ್ಕ್ ಕ್ರಿಮಿನಾಶಕಗಳು ಕಳೆದ ೨ ವರ್ಷಗಳ ಹಿಂದಯೇ ಅವಧಿ ಮೀರಿದ್ದಾಗಿವೆ, ಇಂತಹ ಅಪಾರ ಪ್ರಮಾಣದ ಕ್ರಿಮಿನಾಶಕಗಳು ಪತ್ತೆಯಾಗಿವೆ. ಅವಧಿ ಮೀರಿದ ಕ್ರಿಮಿನಾಶಕಗಳನ್ನು ಏಕೆ ಮಾರಾಟ ಮಾಡತ್ತೀದ್ದೀರಿ ಎಂದು ರೈತರು ಪ್ರಶ್ನೆ ಮಾಡಿದ್ರೆ ಹಿರಿಯ ಅಧಿಕಾರಿಗಳು ಇದನ್ನೆ ಮಾರಾಟ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನುತ್ತಿದ್ದಾರೆ, ಹೀಗಾಗಿ ವಿಷಯ ತಿಳಿಯುತ್ತಿದ್ದಂತೆ ಕಂಪ್ಲಿ ಶಾಸಕ ಸುರೇಶ್ ಬಾಬು ಕೊಳೂರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು, ಶಾಸಕರು, ಮತ್ತು ರೈತರು ಆಕ್ರೋಶಗೊಳ್ಳುತ್ತಿದ್ದಂತೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಅವಧಿ ಮೀರಿದ ಔಷಧಿಗಳನ್ನು ಇದೀಗ ಬೇರೆಡೆ ಸ್ಥಳಾಂತರ ಮಾಡುತ್ತಿದ್ದಾರೆ..

LEAVE A REPLY

Please enter your comment!
Please enter your name here