‘ಸತ್ಯ’ದ ಮಾತುಗಳಿಗೆ ‘ದೊಡ್ಡ’ ‘ಕೈ’ನಲ್ಲಿ ಬಿರುಕು

0
182

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ:ಆಡಳಿತ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಟಿ.ವೆಂಕಟರಮಣಯ್ಯ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಹಿರಿಯ ಮುಂಖಂಡ ಸಿ.ಡಿ.ಸತ್ಯನಾರಾಯಣ ಗೌಡ.
ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ನನ್ನನ್ನು ಪಕ್ಷದಿಂದ ಉಚ್ಛಾಟಿಸುವಂತೆ ಮಾಡಿದ್ದರು ಎಂದು ಆರೋಪಿದ್ದಾರೆ.

ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ,ನಿಜ ಹೇಳ ಬೇಕೆಂದರೆ ಸ್ಥಳೀಯ ಸಂಸ್ಥೆಗಳಾದ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗಳೂ ಖುದ್ದೂ ಈತನೆ ವಿರೋಧ ಪಕ್ಷದವರ ಪರ ಕೆಲಸಮಾಡಿ ಪಕ್ಷ ವಿರೋಧವಾಗಿ ನಡೆದುಕೊಂಡ ಸಾಕ್ಷಾಧಾರಗಳೂ ನನ್ನ ಬಳಿ ಇವೆ, ಕೇವಲ ಹಣಬಲ ಅದರ ಜೊತೆಗೆ ಆಕಸ್ಮಿಕವಾಗಿ ದೊರೆತ ಅಧಿಕಾರವಿದೆ ಎಂಬ ಅಹಂ ನಿಂದ ಕ್ಷೇತ್ರದಲ್ಲಿ ನನ್ನಂಥಹ ಅನೇಕ ಮುಖಂಡರನ್ನು ಕಡೆಗಣಿಸುತ್ತಿರುವ ಮತ್ತು ನಮ್ಮಗಳ ಮೇಲೆ ಇಲ್ಲಸಲ್ಲದ ಆರೋಪ ವೆಸಗುತ್ತಿರುವ ವಿಚಾರ ಈಗಾಗಲೇ ಪಕ್ಷದ ವರಿಷ್ಠರ ಗಮನಕ್ಕೂ ಬಂದಿದ್ದು ಅಲ್ಲೂ ಇವರಬಗ್ಗೆ ಅಸಮಾಧಾನ ವ್ಯಕ್ತವಾಗಿದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯನ್ನಾಗಿ ಈತನನ್ನೇ ಕಣಕಿಳಿಸಿದಲ್ಲಿ ಸೋತು ಅವಮಾನ ಎದುರಿಸಬೇಕಾಗಬಹುದು ಎಂಬ ಚರ್ಚೆಗಳು ನಡೆಯುತ್ತಿರುವುದು ಸುಳ್ಳಲ್ಲಾ ಎಂದಿದ್ದಾರೆ. ಕಾರಣ ಈಗಾಗಲೇ ದೊಡ್ಡ ಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡರಲ್ಲಿ ಇವರ ಬಗ್ಗೆ ಅಸಮಾಧಾನ ಮತ್ತು ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ನಿಷ್ಟಾವಂತ ಕಾರ್ಯಕರ್ತರನ್ನು ಕಡಗಣನೆ, ಮತ್ತು ಆತನ ಸ್ವಜಾತಿ ರಾಜಕಾರಣ ಎಂಬುದೇ ನೇರ ನಿದರ್ಶನ ಎಂದಿದ್ದಾರೆ.

ಟಿ,ವೆಂಕಟರಮಣಯ್ಯ ಕಳೆದ ಚುನಾವಣೆಯಲ್ಲಿ ಶಾಸಕರಾಗಲು ಸಾಕಷ್ಟು ಶ್ರಮಿಸಿದ್ದೇವೆ,ನಾನು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಅಸಮಧಾನ ಬದಿಗಿಟ್ಟು ಪಕ್ಷಕ್ಕೆ ನಿಷ್ಟೆಯಿಂದ ದುಡಿದಿದ್ದೇನೆ.ಹೇಳಬೇಕೆಂದರೆ
ಟಿ,ವೆಂಕಟರಮಣಯ್ಯ ಇಂದು ಶಾಸಕರಾಗಲು ನಾನೇ ಕಾರಣ ಎಂದು ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ.

ಬೈಟ್ :ಸಿ.ಡಿ.ಸತ್ಯನಾರಾಯಣ ಗೌಡ
ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷ

LEAVE A REPLY

Please enter your comment!
Please enter your name here