ರಕ್ತದಾನ ಶಿಬಿರ…

0
142

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಮನುಷ್ಯನ ಪ್ರಾಣ ಉಳಿಸುವಂತ ಶಕ್ತಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ರಕ್ತದಲ್ಲಿರುತ್ತದೆ. ಆ ರಕ್ತ ದಾನ ಮಾಡಿದಾಗ ಮಾತ್ರ ಮತ್ತೊಬ್ಬರ ಜೀವ ಉಳಿಸಲು ಸಾಧ್ಯ ರಕ್ತ ನೀಡುವಂತ ಪುಣ್ಯದ ಕೆಲಸಕ್ಕೆ ಯುವ ಶಕ್ತಿ ಮುಂದಾಗಬೇಕೆಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಕರೆ ನೀಡಿದರು.ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಜನ್ಮಶತಾಬ್ಧಿ ಪ್ರಯುಕ್ತ ಬಿಜೆಪಿ ಹಾಗೂ ರಾಷ್ರೋತ್ಥಾನ ಪರಿಷತ್ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ರಕ್ತ ದಾನಿಗಳಿಗೆ ಹಣ್ಣುಗಳು ಮತ್ತು ಪ್ರಮಾಣ ಪತ್ರ ನೀಡಲಾಯಿತು.ಒಟ್ಟು 48 ಯುನೀಟ್ ರಕ್ತ ಸಂಗ್ರಹಣೆ ಮಾಡುವ ಮೂಲಕ ಪಂಡಿತ್ ದೀನ್ ದಯಾಳ್ ಉಪಾದ್ಯಾಯರ ಆದರ್ಶಗಳು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ರಕ್ತ ದಾನ ಶಿಬಿರಪ್ರತಿಯೊಬ್ಬರು ಉತ್ತಮ ಸಮಾಜ ಕಟ್ಟುವಂತ ಕೆಲಸಕ್ಕೆ ಮುಂದಾಗಿ ತಮ್ಮ ಜೀವನದಲ್ಲಿ ಆದರ್ಶವ್ಯೆಕ್ತಿಗಳಾಗಬೇಕು ಲಕ್ಷಾಂತರ ಕುಟುಂಬಗಳು ಸಮಾಜಿಕವಾಗಿ ಹಿಂದುಳಿದಿದ್ದು ಅವರು ಆರ್ಥಿಕವಾಗಿ ಸಭಲರಾಗಲು ಹಲವಾರು ರೂಪಗಳಲ್ಲಿ ಸಮಾಜ ಸೇವೆಗೆ ಪ್ರತಿಯೊಬ್ಬರು ಮುಂದಾಗಬೇಕು. ಅನಾರೋಗ್ಯಕ್ಕೆ ತುತ್ತಾದ ರೋಗಿಗಳು ಶಸ್ತ್ರ ಚಿಕಿಸ್ತೆಗೆಂದು ಒಳಪಟ್ಟಾಗ ರಕ್ತದ ಕೊರತೆಯಿಂದ ಬಳಲುವುದರ ಜೊತೆಗೆ ಎಷ್ಟೊ ಜೀವಗಳು ಕಳೆದುಕೊಳ್ಳುತ್ತಾರೆ ಅಂಥವರ ಜೀವ ಉಳಿಸಲು ಯುವಕರು ರಕ್ತ ನೀಡಲು ಮುಂದಾಗಬೇಕು ಹಾಗೂ ಪಂಡಿತ್ ದೀನ್ ದಯಾಳ್ ರವರ ಜೀವನದ ಆದರ್ಶಗಳನ್ನು ಅಳವಡಿಸಕೋಳ್ಳಬೇಕೆಂದುಬಿಜೆಪಿ ಮುಖಂಡ ಡಿ.ಆರ್ ಶಿವಕುಮಾರ್ ಗೌಡ ತಿಳಿಸಿದರು.ಈ ಸಂದಭ೯ದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಂಬದಹಳ್ಳಿ ಸುರೇಂದ್ರ ಗೌಡ, ರಾಜ್ಯ ಸಮಿತಿ ಸದಸ್ಯ ದಾಮೋದರ್, ಮುನಿರಾಜು(ಕುಟ್ಟಿ), ಬೈರಾರೆಡ್ಡಿ, ಕೃಷ್ಣಾರೆಡ್ಡಿ, ಮಂಜುನಾಥ್, ಸುಜಾತಮ್ಮ ಹಾಗೂ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here