ಗೋಡೆ ಕುಸಿತ ಓರ್ವ ಸಾವು, ಮತ್ತೊಬ್ಬರಿಗೆ ಕಾಲು ಮುರಿತ…

0
174

ಬಳ್ಳಾರಿ /ಸಿರುಗುಪ್ಪ:ನಗರದ ಅದೋನಿ ರಸ್ತೆ ಪಕ್ಕದ ಭವಾನಿ ಅಕ್ಕಿ ಗಿರಣಿಯಲ್ಲಿ ಬುನಾದಿ ತೋಡುವಾಗ ಪಕ್ಕದ ಗೋದಾಮಿನ ಗೋಡೆ ಕುಸಿದು ಬಿದ್ದ ಕಾರಣ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮತ್ತೋರ್ವನಿಗೆ ಕಾಲು ಮುರಿದಿದೆ. ಧರ್ಮಾನಾಯ್ಕ(27) ಮೃತ ಪಟ್ಟಿದ್ದು, ವೆಂಕಟೇಶ(34) ಚಂದ್ರು ನಾಯ್ಕ ಗೆ ಕಾಲು ಮುರಿದಿದೆ.15 ಜನ ತಾಂಡದವರೇ ಎಲ್ಲರೂ ಬುನಾದಿ ತೋಡುವ ಕೆಲಸದಲ್ಲಿ ನಿರತರಾಗಿದ್ದಾಗ ಅಕಸ್ಮಾತ್ ಗೋಡೆ ಕುಸಿದಿದ್ದು ಅದೃಷ್ಟವಶಾತ್ ಉಳಿದವರೆಲ್ಲರೂ ಪಾರಾಗಿದ್ದಾರೆ.ಕೆಂಚನಗುಡ್ಡ ತಾಂಡದಿಂದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಸಂಭಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಕಾಲು ಮುರಿತಕ್ಕೊಳಗಾದ ಚಂದ್ರು ನಾಯ್ಕ ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here