ನಮ್ಮೂರಲ್ಲಿ `ಟಗರು’ ಚಿತ್ರದ ಚಿತ್ರೀಕರಣ

0
540

ಹೊಸಪೇಟೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ `ಟಗರು’ ಕನ್ನಡ ಚಿತ್ರದ ಚಿತ್ರೀಕರಣ

ಬಳ್ಳಾರಿ /ಹೊಸಪೇಟೆ:ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ `ಟಗರು’ ಕನ್ನಡ ಚಿತ್ರದ ಚಿತ್ರೀಕರಣವು ನಗರದ ಹೊರವಲಯದ ಜೋಳದ ರಾಶಿ ಗುಡ್ಡದಲ್ಲಿ ಹಾಡಿನ ನೃತ್ಯದ ಚಿತ್ರೀಕರಣ ನಡೆಯಿತು. 

ಚಿತ್ರೀಕರಣದಲ್ಲಿ ನೃತ್ಯ ಸಂಯೋಜಕ ಎ. ಹರ್ಷ ಅವರು ನಾಯಕ ನಟ ಶಿವರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ವೋಲ್ಡಾನ್ ವೋಲ್ಡಾನ್ ಎನ್ನುವ ಹಾಡೊಂದದಲ್ಲಿ ಚಿತ್ರದ ಇನ್ನೊಬ್ಬ ನಾಯಕಿ ಮಾನ್ವಿತಾ ಅವರು ಲಂಬಾಣಿ ಮಹಿಳೆಯರೊಂದಿಗೆ ನೃತ್ಯ ಮಾಡುವ ದೃಷ್ಯವನ್ನು ಇಲ್ಲಿನ ಜೋಳದ ರಾಶಿ ಗುಡ್ಡದ ಮೇಲೆ ಚಿತ್ರೀಕರಣ ನಡೆಯಿತು.

ಜೋಳದ ರಾಶಿ ಗುಡ್ಡದ ಮೇಲೆ ಹಾಡಿನ ಕೆಲವು ದೃಷ್ಯಗಳನ್ನು ಚಿತ್ರೀಕರಿಸಲಾಯಿತು. ಇಲ್ಲಿನ ಕಲ್ಲಹಳ್ಳಿ ತಾಂಡ, ಸುಶೀಲ ನಗರ ತಾಂಡ, ಮರಿಯಮ್ಮನಹಳ್ಳಿ ತಾಂಡ ಸೇರಿದಂತೆ ಕೆಲ ತಾಂಡದ ಸುಮಾರು ೧೫೦ಕ್ಕೂ ಹೆಚ್ಚು ಲಂಬಾಣಿ ಮಹಿಳೆಯರು ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿಕೊಂಡು ವೋಲ್ಡಾನ್ ವೋಲ್ಡಾನ್ ಹಾಡಿಗೆ ನೃತ್ಯ ಮಾಡುವಂತಹ ಸನ್ನಿವೇಶಗಳು ಚಿತ್ರೀಕರಣ ನಡೆಯಿತು.

ಬೆಂಗಳೂರಿನಿಂದ ಸುಮಾರು ೧೫-೨೦ ಜನ ಸಹ ನೃತ್ಯ ಕಲಾವಿದೆಯರು ಒಂದೇ ಮಾದರಿಯ ಉಡುಪುಗಳನ್ನು ಧರಿಸಿ ಹಾಡಿನಲ್ಲಿ ನೃತ್ಯ ಮಾಡುವ ಸನ್ನಿವೇಶಗಳು ಸಹ ಇಲ್ಲಿ ಚಿತ್ರೀಕರಿಸಲಾಯಿತು.

ಗುರುವಾರ ನಗರದ ಉಕ್ಕಡಕೇರಿಯ ಗರಡಿ ಮನೆಯಲ್ಲಿ ಚಿತ್ರದಲ್ಲಿ ಖಳನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನುಂಜಯ ಮತ್ತು ವಶಿಷ್ಟ ಸಿಂಹ ಅವರ ನಡುವಿನ ಸಂಭಾಷಣೆಯ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಕಾಕ್ರೋಚ್ ಎಂಬ ಖಳನಾಯಕನನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಿರುವ ವಿಷಯ ತಿಳಿದ ಖಳನಾಯಕ ಧನಂಜಯ ಹಾಗೂ ವಶಿಷ್ಟ ಸಿಂಹ ಮೃತದೇಹಗಳನ್ನು ನೋಡಲು ಬರುವಂತಹ ದೃಷ್ಯಗಳನ್ನು  ನಗರದ ಉಕ್ಕಡಕೇರಿ ಗರಡಿ ಮನೆಯ ಸಮೀಪದಲ್ಲಿ  ಮತ್ತು ನಗರದ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.  

ಆಸ್ಪತ್ರೆಯಲ್ಲಿ ಖಳನಾಯಕರಾದ ಧನಂಜಯ, ವಶಿಷ್ಟಸಿಂಹ ಅವರೊಂದಿಗೆ ನಟಿಯರಾದ ಕೆಂಡಸಂಪಿಗೆ ಚಿತ್ರ ಖ್ಯಾತಿಯ ಮಾನ್ವಿತಾ ಮತ್ತು ಅರ್ಪಿತಾ ಅವರು ಭೇಟಿ ನಂತರ ಖಳನಾಯಕರು, ನಟಿಯರ ಜೊತೆಗೆ ನಡೆಯುವ ಕೆಲ ಸಂಭಾಷಣೆಯ ತುಣುಕುಗಳ ದೃಶಗಳ ಚಿತ್ರೀಕರಿಸಲಾಗಿದೆ.

ಚಿತ್ರದ ನಿರ್ದೇಶಕ ಸೂರಿ, ಕ್ಯಾಮರ ಮಹೇಂದ್ರ ಸಿಂಹ,  ಚಿತ್ರ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕಾರ್ಯಕಾರಿ ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್, ಚಿತ್ರದ ಎಕ್ಸಿಕ್ಯೂಟಿವ್ ನಿರ್ಮಾಪಕ ಸತೀಶ್ ಬಿಲ್ಲಾಡಿ ಸೇರಿದಂತೆ ಚಿತ್ರದ ತಂಡದ ಸುಮಾರು ೧೫೦ಕ್ಕೂ ಹೆಚ್ಚು ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ನಗರದ ಹೊರವಲಯ ಜೋಳದ ರಾಶಿ ಗುಡ್ಡದಲ್ಲಿ ನಡೆಯುತ್ತಿರುವ ಟಗರು ಚಿತ್ರೀಕರಣವನ್ನು ವೀಕ್ಷಿಸಲು ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಶಿವರಾಜ್ ಕುಮಾರ್ ಅಭಿಮಾನಿಗಳು ಗುಡ್ಡವನ್ನು ಹತ್ತಿಕೊಂಡು ಮೇಲೆ ಹೋಗಿ ಚಿತ್ರೀಕರಣವನ್ನು ವೀಕ್ಷಿಸಿದರು. ಕೆಲ ಅಭಿಮಾನಿಗಳು ಶಿವರಾಜ್ ಕುಮಾರ್ ಅವರೊಂದಿಗೆ -ಪೋಟೊ ತೆಗೆಸಿಕೊಳ್ಳತ್ತಿದ್ದರು.

ಚಿತ್ರೀಕರಣ ನಡೆಯುವ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

LEAVE A REPLY

Please enter your comment!
Please enter your name here