ಉತ್ಸವದ ಹಿನ್ನಲೆ ಭರದಿಂದ ಸಾಗಿರುವ ಸ್ವಚ್ಛತಾ ಕಾರ್ಯ..

0
118

ಬಳ್ಳಾರಿ /ಹೊಸಪೇಟೆ.ನ.3,4 ಹಾಗೂ 5 ರಂದು ಜರುಗಲಿರುವ ಹಂಪಿ ಉತ್ಸವ ಹಿನ್ನಲೆಯಲ್ಲಿ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.
3 ದಿನಗಳ ಕಾಲ ಜರುಗಲಿರುವ ವಿಶ್ವ ಪ್ರಸಿದ್ಧ ಹಂಪಿ ಉತ್ಸವ ಹಿನ್ನಲೆಯಲ್ಲಿ ಹಂಪಿಯಲ್ಲಿ ಶುಕ್ರವಾರದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಹಂಪಿಯ ಶ್ರೀವಿರೂಪಾಕ್ಷೇಶ್ವರ ರಥ ಬೀದಿ, ಹಂಪಿ ಕಮಲಾಪುರ ಮಾರ್ಗ, ಹಂಪಿ ಕಡ್ಡಿರಾಂಪುರ ಮಾರ್ಗ, ರಾಣಿ ಸ್ನಾನಗೃಹ, ಕಮಲ್ ಮಹಲ್, ಮಹಾನವಮಿದಿಬ್ಬ, ಆನೆಲಾಯ, ಅಕ್ಕತಂಗಿ ಗುಂಡು, ಸಾಹಸ ಕ್ರೀಡೆಗಳು ನಡೆಯುವ ಸ್ಥಳ, ದ್ವಿಚಕ್ರ ವಾಹನಗಳ ನಿಲುಗಡೆ, ನಾಲ್ಕು ಚಕ್ರ ವಾಹನಗಳ ನಿಲುಗಡೆ ಸ್ಥಳ, ಶ್ರೀಕೃಷ್ಣದೇವಸ್ಥಾನ, ಹಂಪಿ ಗ್ರಾಮ ಪಂಚಾಯಿತಿ ಕಛೇರಿ ಎದುರಿನ ಸ್ಥಳ ಸೇರಿದಂತೆ ಮುಖ್ಯಮಂತ್ರಿಗಳು ಬಂದು ಹೋಗುವ ರಸ್ತೆ ಸೇರಿದಂತೆ ಪ್ರಮುಖ ರಸ್ತೆ ಮತ್ತು ವಿವಿಧ ಪ್ರಮುಖ ಸ್ಮಾರಕಗಳ ಬಳಿ ಇರುವ ಗಿಡ-ಗಂಟೆಗಳನ್ನು, ಹುಲ್ಲನ್ನು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ಭರದಿಂದ ಸಾಗಿದೆ.

LEAVE A REPLY

Please enter your comment!
Please enter your name here