ರೈತರ ಹೋರಾಟಕ್ಕೆ ಸಿಕ್ತು ಜಯ…

0
116

ಬಾಗಲಕೋಟೆ: ಕಳೆದ ೪೦ ವಷ೯ಗಳ ರೈತರ ಹೋರಾಟ, ಎಸ್.ನಿಜಲಿಂಗಪ್ಪ ಸೇರಿದಂತೆ ಅನೇಕ ಮುಖ್ಯಮಂತ್ರಿಗಳ ಆಡಳಿತ ಕಾಲದಿಂದಲೂ ರೈತರ ಹೋರಾಟ ನಡೆದೇ ಇತ್ತು. ಆದ್ರೆ ಈ ಯೋಜನೆಗೆ ಮಾತ್ರ ಯಾರು ಸೊಪ್ಪು ಹಾಕಿರಲಿಲ್ಲ. ಆದ್ರೆ ಇದೀಗ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ತೆರದಾಳ ಮತಕ್ಷೇತ್ರದ ಜಪ್ರಿಯ ಶಾಸಕಿ ಉಮಾಶ್ರೀ ಅಧಿಕಾರಕ್ಕೆ ಬರುತ್ತಲೇ ಸಿಎಂ ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದು, ಅಂದಾಜು 175 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇದ್ರಿಂದ ತೇರದಾಳ ಮತಕ್ಷೇತ್ರದ ರೈತರಿಗೆ ಈ ಯೋಜನೆ ಜೀವಜಲವಾಗಿ ಪರಿಣಮಿಸಿದೆ. ಕಳೆದ ಕೆಲವು ತಿಂಗಳಿಂದ ಕಾಮಗಾರಿ ಆರಂಭಗೊಂಡಿದ್ದು, ರೈತರಲ್ಲಿ ತೀವ್ರ ಮಂದಹಾಸ ಮೂಡುವಂತೆ ಮಾಡಿದೆ. ಇತ್ತ ಈ ಭಾಗದ ಕಲ್ಲಳ್ಳಿ ಗ್ರಾಮದ ಸುಪ್ರಸಿದ್ದ ವೆಂಕಟೇಶ್ವರ ದೇವರು ಇರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ವೆಂಕಟೇಶ್ವರ ಏತ ನೀರಾವರಿ ಎಂದೇ ನಾಮಕರಣ ಮಾಡಿರೋದು ವಿಶೇಷ. ೪೦ ವಷ೯ದಿಂದ ಎಂಟತ್ತು ಗ್ರಾಮಗಳ ರೈತರನ್ನ ಒಗ್ಗೂಡಿಸಿಕೊಂಡು ಹೋರಾಟದ ರೂಪುರೇಷೆ ಹುಟ್ಟಾಕಿದ ಕಲ್ಲಳ್ಳಿ ಗ್ರಾಮದ ಸಂಗಪ್ಪ ಉಪ್ಪಲದಿನ್ನಿ ಅವರ ಅವಿರತ ಪ್ರಯತ್ನಕ್ಕೆ ಕ್ಷೇತ್ರದ ಶಾಸಕಿ ಉಮಾಶ್ರೀ ಸಿಎಂ ಅವರನ್ನ ಕರೆಯಿಸಿ ಕಾಮಗಾರಿಗೆ ಗುದ್ದಲಿಪೂಜೆ ನೆರವಿರಿಸಿ ಬರದನಾಡಿಗೆ ಭಗಿರಥರಾದ್ರು ಶಾಸಕಿ ಉಮಾಶ್ರೀ. ಇನ್ನು ವೆಂಕಟೇಶ್ವರ ಏತನೀರಾವರಿ ಯೋಜನೆಯ ಫಲಾನುಭವಿ ಗ್ರಾಮಗಳಾದ ಕಲ್ಲಳ್ಳಿ ನಾವಲಗಿ,ಜಗದಾಳ,ಚಿಮ್ಮಡ್,ಶಿರೋಳ,ಸಿದ್ದಾಪೂರ ಹಾಗು ಮುಗಳಖೋಡ ಗ್ರಾಮಗಳ ರೈತರ ಬೇಡಿಕೆ ಇಂದು ಫಲಪ್ರದವಾಗಿದ್ದು ಜಾತಕಪಕ್ಷಿಯಂತೆ ಕಾಯ್ದಿದ್ದ ರೈತರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಜಮಖಂಡಿ ತಾಲುಕಿನ ಕುಲ್ಲಳ್ಳಿ ಗ್ರಾಮದ ಹೊರವಲಯದಲ್ಲಿ ಕೃಷ್ಣಾ ನದಿಗೆ ಬ್ರಹತ್ ಪ್ರಮಾಣದ ಜಾಕ್ ವಿಲ್ ನಿರ್ಮಿಸಿ ಅಲ್ಲಿಂದ ಸುಮಾರು ೯ ಕೀ.ಮೀ ವರೆಗೆ ಪೈಪ್ ಲೈನ್ ಮೂಲಕ ಕಲ್ಲಳ್ಳಿ ಗ್ರಾಮದ ಎತ್ತರ ಬಾಗದಲ್ಲಿ ನದಿ ನೀರು ಲಿಪ್ಟ್ ಮಾಡಿ ಅಲ್ಲಿಂದ ತೆರದಾಳ ಕ್ಷೇತ್ರದ ಸುಮಾರು ೮ ಹಳ್ಳಿಗಳ ಒಟ್ಟು ೧೮ ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ ವೆಂಕಟೇಶ್ವರ ಏತನೀರಾವರಿ ಯೋಜನೆ.ಇನ್ನು ಮೂರನಾಲ್ಕು ತಿಂಗಳಲ್ಲಿ ರೈತರ ಜಮೀನಿಗೆ ನೀರು ಹರಿದು ಬರಲಿದ್ದು ಈ ಭಾಗದ ರೈತ ಸಮೂಹ ಸಚಿವೆ ಉಮಾಶ್ರೀ ಅವರ ಕಾಯ೯ವೈಖರಿಗೆ ಕೃತಜ್ಞತೆಯನ್ನ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here