ರಸ್ತೆ ಅಪಘಾತ,ಯುವಕ ಸ್ಥಳದಲ್ಲೇ ಸಾವು.

0
294

ಬಳ್ಳಾರಿ/ಬಳ್ಳಾರಿ:ಗಣಿನಾಡು ಬಳ್ಳಾರಿಯಲ್ಲಿ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳ್ಳಾರಿಯ ದುರುಗಮ್ನ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಅಂಡರ್ ಪಾಸ್ ನಲ್ಲಿ ಈ ಘಟನೆ ನಡೆದಿದ್ದು, ಸತ್ಯನಾರಾಯಣ ಪೇಟೆ ನಿವಾಸಿ ರಂಜೀತ್(೨೪) ಮೃತ ದುರ್ದೈವಿ. ಬೆಳಗ್ಗೆ ಕೆಲಸದ ಮೇಲೆ ಹೊರಗಡೆ ತಮ್ಮ ಸ್ಕೂಟಿ ಮೇಲೆ ಹೊರಟಿದ್ದು, ಸ್ಕೂಟಿ ಸ್ಕಿಡ್ ಆಗಿ ಬಿದ್ದಿದ್ದಾನೆ. ಕೆಳಗೆ ಬಿದ್ದ ನಂತರ ಮೇಲೇಳುವಷ್ಟರಲ್ಲಿ ತಲೆಯ ಮೇಲೆ ವಾಹನ ಹರಿದಿದೆ. ವಾಹನ ತಲೆ ಮೇಲೆ ಹರಿದು ಹಾಗೆಯೇ ಹೊರಟುಹೋಗಿದೆ. ಸದ್ಯ ರಂಜೀತ್ ಮೃತದೇಹ ವಿಮ್ಸ್ ನಲ್ಲಿದ್ದು,  ತಲೆಯ ಮೇಲೆ ಹರಿದ ವಾಹನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here