ನಗರಸಭೆ ಮುಂದೆ ಪ್ರತಿಭಟನೆ..

0
186

ಬಳ್ಳಾರಿ/ಹೊಸಪೇಟೆ:ಖಾತೆ ಬದಲಾವಣೆಗಾಗಿ ನಿಗಧಿತ ಅವಧಿಯಲ್ಲಿ ಪಾರಂ-ಮೂರು ನೀಡಬೇಕು ಒತ್ತಾಯಿಸಿ, ವಿಜಯನಗರ ರಕ್ಷಣಾ ವೇದಿಕೆ ಕಾರ್ಯಕರ್ತರು, ನಗರಸಭೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.ನಗರಸಭೆ ಆವರಣದಲ್ಲಿ ಜಮಾವಣೆಗೊಂಡ, ಪ್ರತಿಭಟನೆಕಾರರು, ಪಾರಂ-3 ನೀಡಲು ವಿನಕಾರಣ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದು, ಈ ಧೋರಣೆಯಿಂದ ಜನರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಾರಂ-3 ಸಿಗದೇ ಜನರು, ತಮ್ಮ ಆಸ್ತಿ ಪರಬಾರೆ, ಮಾರಾಟ, ಅಡಮಾನ ಸಾಲ ಪಡೆಯುವುದು, ಜಾಮೀನು ನೀಡುವುದು ಸೇರಿ ಅನೇಕ ವ್ಯವಹಾರಗಳಿಗೆ ತೊಂದರೆಯಾಗಿದೆ. ಹೀಗಾಗಿ ಕೂಡಲೇ ಪಾರಂ-3 ನೀಡಲು ಪೌರಾಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಕಟಿಗಿ ಜಂಬುಯ್ಯ ನಾಯಕ, ವಕೀಲರಾದ ಕೆ.ರಾಮಪ್ಪ, ಡಿ.ಬಾಷಾ, ಎಚ್.ಜಿ.ಪಾಂಡುರಂಗ, ಕಚಿಡಿ ಕೇಶವ ಸೇರಿದಂತೆ ಇತರರಿದ್ದರು.

ಮೊಬೈಲ್ ಟವರ್ ಅಳವಡಿಕೆ ಬೇಡ:

ನಗರದ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದ ಕಲ್ಯಾಣ ಮಂಟಪದ ಕಟ್ಟಡ ಮೇಲೆ ಮೂಬೈಲ್ ಟವರ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಇದನ್ನು ತಡೆಯಬೇಕು ಎಂದು ಅಖಿಲ ಕರ್ನಾಟಕ ಭೋವಿ ವೇದಿಕೆ ಪದಾಧಿಕಾರಿಗಳು ಪೌರಾಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು. ಮುಖಂಡರಾದ ಗೋವಿಂದ ,ಜಂಬಯ್ಯ ಹಾಗೂ ಚಂದ್ರ ಇತರರಿದ್ದರು.

LEAVE A REPLY

Please enter your comment!
Please enter your name here