ಇಂದಿರಾಗಾಂಧಿ ನೂರನೇ ಜಯಂತಿ ಆಚರಣೆ..

0
138

ಬಳ್ಳಾರಿ/ಬಳ್ಳಾರಿ:ಭಾರತದ ಮಾಜಿ ಪ್ರಧಾನಮಂತ್ರಿ ದಿ.ಇಂದಿರಾ ಗಾಂಧಿ ಅವರ ನೂರನೇ ಜಯಂತಿಯನ್ನು ಬಳ್ಳಾರಿಯಲ್ಲಿ ಆಚರಿಸಲಾಯಿತು.ಇಲ್ಲಿನ ಕಂಟೋನ್ಮೆಂಟ್ ನಲ್ಲಿ ರುವ ಕಾಂಗ್ರೆಸ್ ಕಚೇರಿಯಲ್ಲಿ ಶ್ರೀ ಮತಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್ ಶ್ರೀಮತಿ ಇಂದಿರಾ ಗಾಂಧಿ ಅವರ ಜೀವನ ಸಾಧನೆಗಳನ್ನು ಮೆಲುಕು ಹಾಕಿದರು.ದೇಶಕ್ಕೆ ನೆಹರು ಮತ್ತು ಗಾಂಧಿ ಕುಟುಂಬ ಅನನ್ಯವಾದ ಕೊಡುಗೆ ನೀಡಿದೆ ಎಂದು ಸ್ಮರಿಸಿದರು.

ಈವೇಳೆ ಮಹಾನಗರ ಪಾಲಿಕೆ ಮೇಯರ್ ವೆಂಕಟರಮಣ, ಮಾಜಿ ಉಪಮೇಯರ್ ಬೆಣಕಲ್ ಬಸವರಾಜಗೌಡ, ಕೆಪಿಸಿಸಿ ಸದಸ್ಯ ಕಲ್ಲುಕಂಬ ಪಂಪಾಪತಿ, ಪಾಲಿಕೆ ಸದಸ್ಯರಾದ ಪರ್ವಿನ್ ಬಾನು,ಕುಮಾರಮ್ಮ, ಶ್ರೀ ಕೃಷ್ಣದೇವರಾಯ ವಿವಿ ಸೆನೆಟ್ ಸದಸ್ಯರು ಹಾಗೂ ವಕೀಲರಾದ ವೆಂಕಟೇಶ್ ಹೆಗಡೆ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here