ವಿದ್ಯಾರ್ಥಿ ನೇಣಿಗೆ ಶರಣು..

0
581

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಬಟ್ಲಹಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ಸುಧಾಕರ್ ನೇಣಿಗೆ ಶರಣು‌.ತಾಲ್ಲೂಕಿನ ಇರಗಂಪಲ್ಲಿ ಗ್ರಾಮದ ಈಶ್ವರ್ ಇಂಗ್ಲೀಷ್ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಸುಧಾಕರ್ 13 ವರ್ಷ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುತ್ತಾಯಿದ್ದಾರೆ ನಾನು ಪ್ರವಾಸಕ್ಕೆ ಹೋಗಬೇಕೆಂದು ಕೇಳಿದಾಗ ಮನೆಯಲ್ಲಿ ಪ್ರಾವಾಸಕ್ಕೆ ನಿರಾಕರಿಸಿದ್ದ ಕಾರಣ ಸುಧಾಕರ್ ಮಂಗಳವಾರ ರಾತ್ರಿ ಅಜ್ಜಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಸುಧಾಕರ್ ಬಿನ್ ಲೇಟ್ ಸುಬ್ರಮಣಿ ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.ಸುಧಾಕರ್ ಅಜ್ಜ ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಪಡೆದುಕೊಂಡು ಇರಗಂಪಲ್ಲಿ ಗ್ರಾಮದಲ್ಲಿ ಇರುವುದು ತಿಳಿದುಬಂದಿದೆ.
ವಿಷಯ ತಿಳಿದು ತಕ್ಷಣ ಬಟ್ಲಹಳ್ಳಿ ಠಾಣೆಯ ಎಸ್ಐ ಪಾಪಣ್ಣ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ಮಾಡಿ ಮೃತ ಸುಧಾಕರ್ ಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಗಾರ ಕೊಠಡಿ ಸಾಗಿಸಿದ್ದಾರೆ.ಪ್ರಕರಣ ದಾಖಲಿಸಿಕೋಂಡು ಬಟ್ಲಹಳ್ಳಿ ಪೊಲೀಸರು ಮುಂದಿನ ದಿನ ಕ್ರಮಕೈಗೊಂಡಿದ್ದಾರೆ .

LEAVE A REPLY

Please enter your comment!
Please enter your name here