ಉಚಿತ ಹೃದ್ರೋಗ ತಪಾಸಣಾ ಶಿಬಿರ

0
155

ಬಳ್ಳಾರಿ /ಹೊಸಪೇಟೆ: ಐದು ನಿಮಿಷಕ್ಕೆ ಒಬ್ಬರು ಹೃದಯಾಘಾತಕ್ಕೊಳಗಾಗುತ್ತಿದ್ದು, ಆರೋಗ್ಯ ಜಾಗೃತಿಯನ್ನು ಎಲ್ಲರೂ ಹೊಂದಬೇಕು ಎಂದು ಹಂಪಿ ಜಿ.ಪಂ. ಸದಸ್ಯ ಪ್ರವೀಣ್ ಸಿಂಗ್ ಹೇಳಿದರು.

ಸ್ಥಳೀಯ ಎಂ.ಜೆ. ನಗರದ ಯುನಿಟಿ ಟೀಮ್ ಹಾಗೂ ಎಸ್.ಎಸ್. ನಾರಾಯಣ ಹೃದಯಾಲಯ ಸೆಂಟರ್ ವತಿಯಿಂದ ನಗರದ ಕೃಷ್ಣ ಟ್ಯೂರಿಸ್ಟ್ ಹೋಂನಲ್ಲಿ ನಡೆದ ಹೃದಯದ ಉಚಿತ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒತ್ತಡದ ಬದುಕಿನಿಂದ ಹೃದಯ ಕಾಯಿಲೆ ಉಂಟಾಗುತ್ತಿದೆ. ಆಧುನಿಕ ಯುಗದಲ್ಲಿ ಎಲ್ಲರೂ ಒತ್ತಡದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಗಮನಹರಿಸಬೇಕು. ಆರೋಗ್ಯದ ಕಡೆಗೆ ಎಲ್ಲರೂ ಕಾಳಜಿ ಹೊಂದಬೇಕು.  ಇಂಥ ಶಿಬಿರಗಳಲ್ಲಿ ಪಾಲ್ಗೊಂಡು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ, ಆರೋಗ್ಯ ಹೊಂದಬೇಕು ಎಂದರು.

ಶಾಸಕ ಆನಂದ್ ಸಿಂಗ್ ಮಾತನಾಡಿ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಸಹಾಯ ಮಾಡಿರುವೆ. ಎಲ್ಲರೂ ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮುಖಂಡರಾದ ಪಂತರ್ ಜಯಂತ್, ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ವೈದ್ಯರು ಮತ್ತಿತರರಿದ್ದರು.

LEAVE A REPLY

Please enter your comment!
Please enter your name here