ಬೆಂಗಳೂರು ಒನ್ ಕೇಂದ್ರಕ್ಕೆ ಶಾಸಕ ಬೈರತಿ ಬಸವರಾಜು ಚಾಲನೆ

0
149

ಬೆಂಗಳೂರು (ಕೃಷ್ಣರಾಜಪುರ): ಬೆಂಗಳೂರು ಒನ್ ಕೇಂದ್ರಕ್ಕೆ ಶಾಸಕ ಬೈರತಿ ಬಸವರಾಜು ಚಾಲನೆ ನೀಡಿದರು. ಇಲ್ಲಿನ ಎ.ನಾರಾಯಣ ಪುರದಲ್ಲಿ ನಿರ್ಮಾಣಗೊಂಡಿದ್ದ ಬೆಂಗಳೂರು ಒನ್ ಕೇಂದ್ರಕ್ಕೆ ಇತ್ತೀಚಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ನೀರಿನ ಬಿಲ್, ವಿದ್ಯೂತ್ ಬಿಲ್, ಮೊಬೈಲ್ ಬಿಲ್ ಮತ್ತು ತೆರಿಗೆ ಪಾವತಿಸಲು ಅದರದ್ದೇ ಆದ ಕೇಂದ್ರಗಳಿಗೆ ತೆರಳಬೇಕಿದ್ದ ಅವಶ್ಯಕತೆಯಿಂದ ಕೆಲಸಗಳಿಗೆ ರಜೆ ಹಾಕಿ ತಿರುಗ ಬೇಕಿತ್ತು ಇದರಿಂದ ಸಮಯ ಮತ್ತು ಹಣದ ವ್ಯವಯವೂ ಆಗುತ್ತಿತ್ತು, ಬೆಂಗಳೂರು ಒನ್ ಕೇಂದ್ರದಲ್ಲಿ ಈ ಎಲ್ಲಾ ಸೇವೆಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕರಿಗೆ ಅಗತ್ಯವಿರುವ ಹಲವು ಸೇವೆಗಳು ಲಭ್ಯವಿದ್ದು, ಸ್ಥಳೀಯ ಜನತೆಗೆ ಅನುಕೂಲವಾಗಿದೆ, ಸಮಯ ಮತ್ತು ಹಣದ ವ್ಯಯವೂ ಕಡಿಮೆಯಾಗಲಿದೆ ಆದ ಕಾರಣ, ಸಾರ್ವಜನಿಕರು ಬೆಂಗಳೂರು ಒನ್ ಕೇಂದ್ರದ ಸೇವೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಇದೆ ವೇಳೆ ಅರ್ಹ ಫಲಾನುಭವಿಗಳಿಗೆ ಕಾವೇರಿ ನೀರಿನ ಮೀಟರ್‍ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸುರೇಶ್, ಸುಬ್ಬಾರೆಡ್ಡಿ, ಕೋದಂಡ ರೆಡ್ಡಿ, ಅನೀಫ್, ಜ್ಯೋತಿ ಪ್ರಕಾಶ್, ಚಿನ್ನರಾಜು, ರೋಹಿಣಿ, ಭಾರತಿ, ರಾಮು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here