ಕರಾಟೆ ಪಟುಗಳಿಗೆ ಅಭಿನಂದನಾ ಕಾರ್ಯಕ್ರಮ..

0
178

ಬಳ್ಳಾರಿ/ಹೊಸಪೇಟೆ:ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ 35ನೇ ಬುಡೋಕನ್ ಕರಾಟೆ –ಡು-ಇಂಡಿಯಾ ಇವರು ನ. 24 ರಿಂದ 26 ರವರೆಗೆ ಆಯೋಜಿಸಿದ್ದ 2017 ರ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಫ್‍ನಲ್ಲಿ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಫುನಾಕೋಷಿ ಶೋಟೋಕನ್ ಕರಾಟೆ ಪಟುಗಳು ವಿವಿಧ ವಿಭಾಗದಲ್ಲಿ ಭಾಗವಹಿಸಿ ಕಟಾ ಮತ್ತು ಕುಮಟೆಯಲ್ಲಿ ಪ್ರಥಮ, ದ್ವಿತಿಯಾ ಹಾಗೂ ತೃತಿಯಾ ಸ್ಥಾನ ಪಡೆಯುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. 

ವಿಜೇತರು: ಕರಾಟೆ ಪಟುಗಳಾದ ಟಿ.ಖಾಸಿಂ ಪೀರ ಬ್ರೌನ್ ಬೆಲ್ಟ್ (48 ಕೆ.ಜಿ) ವಿಭಾಗ ಕುಮಟೆಯಲ್ಲಿ (ದ್ವಿತಿಯಾ), ಕಟಾ ಸ್ಫರ್ಧೆಯಲ್ಲಿ (ತೃತಿಯಾ) ಸ್ಥಾನ, ಎಂ.ಕನಕರಾಜ್ ಬ್ಲೂ ಬೆಲ್ಟ್ ವಿಭಾಗ ಕಟಾ ಸ್ಪರ್ಧೆಯಲ್ಲಿ(ದ್ವಿತಿಯಾ) ಸ್ಥಾನ ಹಾಗೂ ಈ.ರಮೇಶ ವೈಟ್ ಬೆಲ್ಟ್(55 ಕೆ.ಜಿ) ವಿಭಾಗದಲ್ಲಿ ಕುಮಟೆ (ಪ್ರಥಮ) ಸ್ಥಾನ ಪಡೆದಿದ್ದಾರೆ. ಕರಾಟೆ ಪಟುಗಳಾದ ಎ.ಮೆಹಬೂಬ್ ಬಾಷ, ದಾದಾ ಖಲಂದರ್, ಆನಂದ ಭಾಗವಹಿಸಿದ್ದರು. ಹೊಸಪೇಟೆಯ ಶೋಟೋಕನ್ ಕರಾಟೆ ತರಬೇತುದಾರರಾದ ಸೆನ್‍ಸಾಯಿ ಕೆ.ರಾಮಣ್ಣ ಹಾಗೂ ಮರಿಯಮ್ಮನಹಳ್ಳಿಯ ಕರಾಟೆ ತರಬೇತುದಾರರಾದ ಜಿ.ನಾಗರಾಜ್ ಇವರ ನೇತೃತ್ವದಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಅಸ್ಸಾಂ, ಮಣಿಪುರ, ಜಮ್ಮುಕಾಶ್ಮೀರ, ಪಶ್ಚಿಮ ಬಂಗಾಳ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಕರಾಟೆ ಪಟುಗಳು ಪಾಲ್ಗೊಂಡಿದ್ದರು. ಫುನಾಕೋಷಿ ಕರಾಟೆ ಸಂಸ್ಥೆಯ ಬಳ್ಳಾರಿ ಜಿಲ್ಲಾ ಮುಖ್ಯಸ್ಥ ಡಿ.ಸುರೇಶ್ ಅಭಿನಂದಿಸಿದರು.

LEAVE A REPLY

Please enter your comment!
Please enter your name here