ಜನಹಿತ ಕಾಪಾಡುವಲ್ಲಿ ರಾಜಕೀಯ ಪಕ್ಷಗಳು ವಿಫಲ..

0
116

ರಾಯಚೂರು:ಜನಹಿತ ಕಾಪಾಡುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ವೈಯಕ್ತಿಕ ತೇಜೋವಧೆಗೆ ಇಳಿದಿರುವುದು ವಿಷಾದನೀಯ ಸಂಗತಿಯಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನಪರಿಯಾಯ ಶಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ಮಹಾಮೈತ್ರಿ ಕಾರ್ಯಪ್ರವೃತವಾಗಿದೆ ಎಂದು ಜನಸಂಗ್ರಾಮ್ ಪರಿಷತ್‍ನ ಸಂಚಾಲಕ ಎಸ್.ಆರ್.ಹಿರೇಮಠ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜನಹಿತವನ್ನು ಬದಿಗಿಟ್ಟು ವೈಯಕ್ತಿಕ ಆರೋಪದಲ್ಲೇ ಕಾಲಾಹರಣ ಮಾಡುತ್ತಿದ್ದು, ನಿರುದ್ಯೋಗ, ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ರೈತರನ್ನು ಸಾಲಗಾರರನ್ನಾಗಿ ಪರಿವರ್ತಿಸಿ ಆತ್ಮಹತ್ಯೆ ಪ್ರಕರಣಗಳ ಅಂತ್ಯಕ್ಕೆ ಯಾವುದೇ ರೀತಿಯ ಕಾರ್ಯ ಯೋಜನೆಗಳು ರೂಪಿಸುವಲ್ಲಿ ಸರಕಾರಗಳು ವಿಫಲವಾಗಿದ್ದು, ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಹೇಳಿಕೊಂಡಿದ್ದ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದರೂ, ಈ ಕುರಿತು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದು, ಎಲ್ಲರಿಗೂ ವಸತಿ ಮತ್ತು ಭೂಮಿ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಜನ ಆಂದೋಲನಾ ಮಹಾಮೈತ್ರಿಯಲ್ಲಿ 24 ಸಂಘಟನೆಗಳ ಸಹಯೋಗದಲ್ಲಿ ಚುನಾವಣೆಯ ಸಂದರ್ಭದಲ್ಲಿ ಜನಹಿತ ಕಾಪಾಡುವ ವ್ಯಕ್ತಿಯನ್ನು ಕಣಕ್ಕಿಳಿಸುವ ಚಿಂತನೆ ನಡೆದಿದ್ದು, ಸೇವಾ ಮನೋಭಾವನೆ, ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಮಹಾಮೈತ್ರಿ ಬೆಂಬಲಿಸಲಿದ್ದು, ಈ ನಿಟ್ಟಿನಲ್ಲಿ ರಾಜ್ಯಾದಾದ್ಯಂತ ಸಂಘಟನಾತ್ಮಾಕ ಪ್ರಚಾರ ಕಾರ್ಯ ನಡೆದಿದೆ ಎಂದರು.
ಬಳ್ಳಾರಿಯ ಗಣಿ ಅಕ್ರಮದಲ್ಲಿ ಎಲ್ಲ ರಾಜಕೀಯ ಮುಖಂಡರು ಶಾಮೀಲಾಗಿದ್ದು, ಸಚಿವ ಸಂತೋಷ ಲಾರ್ಡ್ ಅವರನ್ನು, ಯಾರು ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆಯ ಹೋರಾಟ ನಡೆಸಿದ್ದರೂ, ಅವರೇ ಇಂದು ಸಚಿವರ ರಕ್ಷಣೆಗೆ ಮುಂದಾಗಿದ್ದು, ರಾಜ್ಯದ 7 ಬಂದರುಗಳ ಮೂಲಕ ಅಂದಾಜು 1.50 ಲಕ್ಷ ಕೋಟಿ ರೂ. ವೆಚ್ಚದ ಅದಿರು ಅಕ್ರಮವಾಗಿ ಸಾಗಿಸಲಾಗಿರುವುದು ಸದನ ಸಮಿತಿ ವರದಿಯಿಂದ ಬಹಿರಂಗಗೊಂಡಿದ್ದು, ಅಕ್ರಮ ಗಣಿಗರಿಕೆ ಕುರಿತು ಅಂದಿನ ಲೋಕಾಯುಕ್ತರಾದ ಸಂತೋಷ ಹೆಗ್ಡೆರವರು ವಿಸ್ತøತ ವರದಿ ನೀಡಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿದ್ದು, ವೈಯಕ್ತಿಕ ಬೆಳೆವಣಿಗೆಗೆ ಪ್ರಥಮ ಆದ್ಯತೆ ನೀಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ಇಂದು ಮುಖ್ಯಮಂತ್ರಿಯವರು ಸರಕಾರದ ಹಣದಲ್ಲಿ ಸಾಧನೆಯಾತ್ರೆ ಮುಖಾಂತರ ಪರೋಕ್ಷವಾಗಿ ರಾಜಕೀಯ ಪಕ್ಷದ ಯಾತ್ರೆಯನ್ನಾಗಿ ಮಾರ್ಪಾಡಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ಮತದಾನದ ಯಂತ್ರಗಳು ದೋಷಪೂರಿತವಾಗಿರುವ ಕುರಿತು ರಾಜಕೀಯ ಪಕ್ಷಗಳಲ್ಲಿ ಸಹಮತವಿಲ್ಲದ ಕಾರಣ ಒಮ್ಮತ ಬರುವವರೆಗೆ ಹಳೆಯ ಮತದಾನ ಪದ್ಧತಿಯನ್ನೇ ಜಾರಿಗೊಳಿಸಬೇಕೆಂದರು. ಈ ಸಂದರ್ಭದಲ್ಲಿ ಮಹಾಮೈತ್ರಿ ಮುಖಂಡರಾದ ರಾಘವೇಂದ್ರ ಕುಷ್ಟಗಿ, ಚಾಮರಸ ಮಾಲೀಪಾಟೀಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here