ಚಿಕ್ಕಬಳ್ಳಾಪುರ/ಚಿಂತಾಮಣಿ:- ತಮ್ಮ ಜಮೀನಿನಲ್ಲಿ ಬೇರೊಬ್ಬರು ಅಕ್ರಮ ವಾಗಿ ನಿರ್ಮಾಣ ಮಾಡಿರುವ ಡಾಬ ಗೆ ಯಾವ ಆಧಾರದ ಮೇಲೆ ಪರವಾನಗಿ ನೀಡಿದ್ದಿರಾ ಎಂದು ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ನೀಡಿ ಎಂದು ಗ್ರಾಪಂ ಅಧಿಕಾರಿಗಳಿಗೆ ಆರ್ಜಿ ಸಲ್ಲಿಸಿದ್ದು ಇದರಂತೆ ಅಧಿಕಾರಿ ಬಳಿ ಮಾಹಿತಿ ಕೆಳುವುದಕ್ಕೆ ಹೋಗಿದ್ದ ವೇಳೆ ಡಾಬ ಮಾಲಿಕರ ಸಂಬಂದಿಕ ಮಹಿಳೆಯ ಮೇಲೆ ಹಲ್ಲೆ ಮಾಡಿ ಗಾಯ ಗೊಳಿಸಿರುವ ಘಟನೆ ತಾಲೂಕಿನ ನಂದಿಗಾನಹಳ್ಳಿ ಗ್ರಾಪಂ ಕಾರ್ಯಾಲಯ ಬಳಿ ನಡೆದಿದೆ.
ಹಲ್ಲೆಗೆಒಳಗಾದ ಮಹಿಳೆ ನಂದಿಗಾನಹಳ್ಳಿ ಗ್ರಾಮದ ಗೋವಿಂದಪ್ಪನ ಮಗಳು ಪ್ರಭಾವತಿ ಎಂದು ತಿಳಿದು ಬಂದಿದ್ದು ಗಾಯಾಳು ಚಿಂತಾಮಣಿ ನಗರದ ಸರ್ವಾಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಲ್ಲೆ ಮಾಡಿದ ವ್ಯಕ್ತಿಯನ್ನು ಅದೇ ಗ್ರಾಮದ ನಾರೆಪ್ಪ ಎಂದು ಗುರ್ತಿಸಲಾಗಿದೆ.
ನಮ್ಮ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಡಾಬಗೆ ಪರವಾನಗಿ ನೀಡಿರುವ ಮಾಹಿತಿ ಕೇಳಿದ್ದರು ಎಂದು ತಿಳಿದು ಬಂದಿದೆ ೧೨ ರಂದು ಹಕ್ಕು ಮಾಹಿತಿ ಅಡಿಯಲ್ಲಿ ಮಾಹಿತಿ ಕೇಳಿದ್ದು ಈ ಕುರಿತು ೧೪ ರಂದು ಮಾಹಿತಿ ನೀಡುವುದಾಗಿ ಗ್ರಾಪಂ ಪಿಡಿಒ ಅಧಿಕಾರಿ ಪ್ರಭಾವತಿಗೆ ತಿಳಿಸಿದ್ದಾರೆ, ಅದರಂತೆ ಮಾಹಿತಿ ಪಡೆಯಲು ಹೋಗಿದ್ದ ಪ್ರಭಾವತಿ ಮೇಲೆ ಡಾಬ ಸಂಬದಿಕರಾದ ನಾರೆಪ್ಪ ಎಂಬುವರು ಹಲ್ಲೆ ಮಾಡಿ ಪ್ರಭಾವತಿಯನ್ನು ಅವಾಚ್ಚ ಶಬ್ದಗಳಿಂದ ನಿಂದಿಸಿ ಮಾನಸಿಕ ಹಾಗೂ ದೈಹಿಕ ನೊವುಂಟು ಮಾಡಿದ್ದಾರೆ. ಎಂದು ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಗಿದೆ.