ವಕೀಲರ ಸಂಘದಿಂದ ಪ್ರತಿಭಟನೆ…

0
110

ವಿಜಯಪುರ:ನಗರದಲ್ಲಿ ನಡೆದ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರ-ಹತ್ಯೆ ಘಟನೆ ಖಂಡಿಸಿ ಆರೋಪಿಗಳಿಗೆ ಗಲ್ಲಿಗೆರಿಸಬೇಕು ಎಂದು ಒತ್ತಾಯಿಸಿ ಶನಿವಾರ ವಕೀಲರ ಸಂಘ ಮತ್ತು ಕಾನೂನು ರಕ್ಷಣಾ ವೇದಿಕೆ ಪದಾಧಿಕಾರಿಗಳು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿ ನಂತರ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಶಿರಸ್ತೆದಾರ ಎಚ.ಎಂ.ತಾಳಿಕೋಟಿ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ನೇತೃತ್ವ ವಹಸಿದ ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಕೊಣ್ಣೂರ, ಕಾನೂನು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದಾನಪ್ಪಗೌಡ ಚನಗೊಂಡ, ದಲಿತ ಸೇನೆಯ ರಾಜ್ಯ ಉಪಾದ್ಯಕ್ಷ ಆರ್.ಎಮ್.ಚೌರ, ಮಹಿಳಾ ನ್ಯಾಯವಾದಿ ಗೀತಾ ಸಿಂಗೆ ಮಾತನಾಡಿ, ವಿಜಯಪುರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೋಲೆ ಮಾನವ ಸಮಾಜ ತಲೆತಗ್ಗಿಸುವಂತದ್ದು. ಕೂಡಲೇ ಆರೋಪಿತರನ್ನು ಬಂಧಿಸಿ ಉಗ್ರಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ವಕೀಲರ ಸಂಘದ ಉಪಾದ್ಯಕ್ಷ ಎಸ್.ಎಸ್.ಸಿಂಗಾಡಿ, ಪ್ರದಾನ ಕಾರ್ಯದರ್ಶಿ ಪಿ.ಆರ್.ಯಾಳವಾರ, ಕಾರ್ಯದರ್ಶಿ ಡಿ.ಎಲ್.ಬಂಡಿವಡ್ಡರ, ನ್ಯಾಯವಾದಿಗಳಾದ ಆರ್.ಅಯ್.ಮೋಗಲಾಯಿ, ಎಸ್.ಬಿ.ಖಾನಾಪೂರ, ಮಲ್ಲು ಗತ್ತರಗಿ, ಎಮ್.ಕೆ. ಪತ್ತಾರ, ಎಸ್.ಜಿ.ಯಳವಂತಗಿ, ಬಿ.ಎಸ್.ಪಾಟೀಲ, ಮ.ಜಿ.ಮಲ್ಲೇದ, ವಿ.ಬಿ.ಪಾಟೀಲ, ಪಿ.ಬಿ.ಬಿರಾದಾರ, ಎಸ್.ಬಿ.ಪಾಟೀಲ ಗುಂದಗಿ, ಎಮ್.ಪಿ. ದೊಡಮನಿ, ಎಸ್.ಎ. ಗಾಯಕವಾಡ, ಎ.ಕೆ. ಕನ್ನೂರ, ಪಿ.ಆರ್. ಪೂಜಾರ, ಪಿ. ಎಮ್. ಕುಂಬಾರ, ವಿ.ಜಿ. ಚಾವರ, ಎಮ್.ಕೆ.ಮುಲ್ಲಾ, ಎನ್.ಎಸ್. ಪಾಟೀಲ, ಎಸ್.ಬಿ.ಪಾಟೀಲ ದೇವರಹಿಪ್ಪರಗಿ, ಎನ್.ಜಿ. ಪಟೇಲ, ಜಿ.ಜಿ. ಮಾರ್ಸನಳ್ಳಿ, ಎಸ್.ಜಿ. ಕುಲಕರ್ಣಿ, ಎಮ್.ಸಿ. ಯಾತನೂರ, ಎಸ್.ಎಸ್. ಹಂಗರಗಿ, ಎಸ್.ಬಿ.ದೊಡಮನಿ, ಬಿ. ಎಸ್. ಮಠ, ಎನ್.ಎಸ್. ಬಗಲಿ, ಎಮ್.ಎಸ್. ಪಾಟೀಲ, ಎಮ್. ಬಿ. ಅಂಗಡಿ, ಬಿ.ಸಿ.ಪಾಟೀಲ, ಜಿ.ಎಸ್. ಮನ್ನಾಪೂರ, ಸಿ.ಎಸ್. ಕುಂಬಾರ, ಮುತ್ತು ಮದರಿ, ಆರ್.ಎಂ.ಶಿರಬೂರ, ಸಿ.ಎ.ಚಿಕ್ಕೋಡಿ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ : ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ-9880624377

LEAVE A REPLY

Please enter your comment!
Please enter your name here