ತ್ರೈಮಾಸಿಕ ಕೆ ಡಿ ಪಿ ಸಭೆ…

0
200

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ತಾಲ್ಲೂಕಿನ ಗೂಳೂರು, ಮಾರ್ಗಾನುಕುಂಟೆ ಕಡೆಗಳಲ್ಲಿ ನಡೆಯುತ್ತಿರುವ ಗ್ರಾನೈಟ್ ಕಲ್ಲುಗಳನ್ನು ಲಾರಿಗಳಲ್ಲಿ ಹೆಚ್ಚು ಭಾರದ ಕಲ್ಲುಗಳನ್ನು ಸಾಗಿಸುತ್ತಿರುವುದರಿಂದ ಇಡೀ ರಸ್ತೆಗಳು ಗುಂಡಿಗಳಾಗಿದೆ. ಮೋರಿಗಳು ಕುಸಿದು ಬೀಳುತ್ತಿದೆ. ಅಕ್ರಮ ಗ್ರಾನೈಟ್‍ಗಳ ಕಲ್ಲುಗಳ ಸಾಗಾಟವನ್ನು ತಡೆಯುವಲ್ಲಿ ಪೊಲೀಸ್, ಆರ್‍ಟಿಓ, ಭೂ ವಿಜ್ಞಾನ, ಲೋಕೊಪಯೋಗಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಕ್ರಾಸ್ ಬಳಿ ಅಕ್ರಮ ಕಲ್ಲುಕ್ವಾರಿಯ ಲಾರಿಗಳು ಸಾಗಾಟದಿಂದ ಮೋರಿಗಳು ಕುಸಿದಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ಹಾಕಿ ಸುವ್ಯವಸ್ಥಿತವಾದ ರಸ್ತೆಗಳು ಮಾಡಿಸುವುದು, ಲಾರಿಗಳ ಸಂಚಾರದಿಂದ ರಸ್ತೆಗಳು ಗುಂಡಿಗಳು ಆಗುತ್ತಿದೆ. ಮೋರಿಗಳು ಕುಸಿಯುತ್ತಿದೆ. ಇದಕ್ಕೆ ಯಾವ ಅಧಿಕಾರಿಗಳು ಹೊಣೆ? ಎಂದು ಪ್ರಶ್ನಿಸಿದರು.

ತಾಲ್ಲೂಕಿನ ಗೂಳೂರು, ಮಾರ್ಗಾನುಕುಂಟೆ ಗ್ರಾಮದ ಕಡೆ ಸಂಚರಿಸುತ್ತಿರುವ ಗ್ರಾನೈಟ್ ಲಾರಿಗಳ ಸಂಚಾರದಿಂದ ರಸ್ತೆಗಳು, ಮೋರಿಗಳು ಕುಸಿಯುತ್ತಿದೆ. ಲಾರಿಗಳು ತಡೆದು, ಮೋರಿ, ರಸ್ತೆ ತೊಂದರೆ ಆದರೆ, ಗ್ರಾನೈಟ್‍ರವರ ಲಾರಿ ಹಿಡಿದು, ರಸ್ತೆ ಮಾಡಿಸುವವರಿಗೂ ಲಾರಿ ಬಿಡಬಾರದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಲೋಕೊಪಯೋಗಿ ಇಲಾಖೆ ಸಹಾಯಕ ಅಭಿಯಂತರ ಲಕ್ಷ್ಮೀರವರಿಗೆ ತಿಳಿಸಿದಾಗ, ಗ್ರಾನೈಟ್ ಲಾರಿ ಹಿಡಿಯುವುದಕ್ಕೆ ಹೋದರೆ, ನಮಗೆ ಯಾರು ರಕ್ಷಣೆ ಸಾರ್? ನಾವು ಏನಾದರೂ ಸತ್ತುಹೋದರೆ ನಮ್ಮ ಕುಟುಂಬಕ್ಕೆ ಯಾರು ಆಗುತ್ತಾರೆ? ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಗೆ ಪ್ರಶ್ನಿಸಿದರು.
ಅಧಿಕಾರಿಗಳು ಮನಸ್ಸು ಮಾಡಿದರೆ 4 ನಿಮಿಷದಲ್ಲಿ ಅಕ್ರಮವಾಗಿ ಲಾರಿಗಳಲ್ಲಿ ಹಾಕುವ ಬೃಹತ್ ಕಲ್ಲುಗಳ ಸಾಗಾಟವನ್ನು ತಡೆಯಬಹುದು. ಆದರೆ ಅಧಿಕಾರಿಗಳು ಕಲ್ಲುಕ್ವಾರಿ ಸಾಗಾಟವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳು ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಸಭೆಗೆ ತಾಲ್ಲೂಕು ಅನುಸ್ಠಾನ ಅಧಿಕಾರಿಗಳು ಕೆಡಿಪಿ ಸಭೆಗೆ ಬರದೇ, ಇಲಾಖೆ ಸಿಬ್ಬಂದಿಯವರು ಸಭೆಗೆ ಆಗಮಿಸಿರುವ ಬಗ್ಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕಿನ ಎಲ್ಲಾ ಇಲಾಖೆಗಳ ಪ್ರಗತಿ, ಕಾರ್ಯಯೋಜನೆ, ಅನುದಾನ ಸದ್ಭಳಕೆ ಸೇರಿದಂತೆ ಪ್ರಗತಿಗಳ ಬಗ್ಗೆ ಮಾಹಿತಿ ಪಡೆಯಲು ಕೆಡಿಪಿ ಸಭೆ ಕರೆಯುತ್ತೇವೆ. ಆದರೆ ಕೆಲ ಅಧಿಕಾರಿಗಳು ಗೈರುಹಾಜರಾಗಿ, ಸಿಬ್ಬಂದಿಯವರು ಕಳುಹಿಸಿಕೊಡುತ್ತಾರೆ. ಸಿಬ್ಬಂದಿಯವರಿಗೆ ಪ್ರಗತಿ ಬಗ್ಗೆ ಮಾಹಿತಿ ಇರುವುದಿಲ್ಲ. ಸಭೆಗೆ ಸುಮ್ಮನೆ ಬರ್ತಾರೆ, ಹೋಗ್ತಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸುವಂತೆ ಹಿಂದಿನ ಸಭೆಗಳಲ್ಲಿ ತಿಳಿಸಲಾಗಿತ್ತು. ಸಭೆಗೆ ಬರದ ಅಧಿಕಾರಿಗಳ ವಿರುದ್ಧ ಎಷ್ಟು ನೋಟೀಸ್ ಜಾರಿ ಮಾಡಿದ್ದೀರಿ? ಹಾಗೂ ಸಭೆಗೆ ಬರದ ಅಧಿಕಾರಿಗಳ ಮಾಹಿತಿ ಕೂಡಲೇ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ರೆಡ್ಡಪ್ಪಗೆ ಸೂಚಿಸಿದರು.
ಉಳಿದಂತೆ ತಾಲ್ಲೂಕಿನ ಶಿಕ್ಷಣ, ಆರೋಗ್ಯ, ಲೋಕೊಪಯೋಗಿ, ಅಕ್ಷರದಾಸೋಹ, ಬಿಸಿಎಂ, ಸಮಾಜ ಕಲ್ಯಾಣ, ಕೃಷಿ, ಪಶು, ಜಿಲ್ಲಾ ಪಂಚಾಯತ್, ಕುಡಿಯುವ ನೀರು, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ತಿಳಿಸಿದರು.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ರೆಡ್ಡಪ್ಪ, ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಕೆಡಿಪಿ ಸದಸ್ಯರಾದ ಅಮರನಾತರಡ್ಡಿ, ರಘುನಾಥರೆಡ್ಡಿ, ಆನಂದ್, ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ಶೇಷಾದ್ರಿ, ರಾಮಲಿಂಗಾರೆಡ್ಡಿ ಸೇರಿದಂತೆ ತಾಲ್ಲೂಕಿನ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here