ಬೃಹತ್ ಪ್ರತಿಭಟನೆ…

0
460

ಬೆಂಗಳೂರು:ಅಖಿಲ ಭಾರತ ರಜಕ (ಮಡಿವಾಳ) ಮಹಾಸಭಾದವತಿಯಿಂದ ನಗರದ ಆನಂದರಾವ್ ವೃತ್ತದಲ್ಲಿ ಮಡಿವಾಳರ ಅಭಿವೃದ್ಧಿಯ ನಿಗಮ ಸ್ಥಾಪನೆ ಹಾಗೂ ಪ್ರೊಫೆಸರ್ ಅನ್ನಪೂರ್ಣಮನವರ ವರದಿಯನ್ನು ಕೂಡಲೇ ಜಾರಿ ತರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.ಧರಣಿ ಸತ್ಯಾಗ್ರಹದಲಿ ಹಿರಿಯ ಸ್ವಾತಂತ್ರ ಹೋರಾಟಗಾರರದ ಕರ್ನಾಟಕದ ಗಾಂಧೀಜಿ ಎಂದೆ ಹೆಸರಾದ ಎಚ್ ಎಸ್ ದೊರೆಸ್ವಾಮಿ ರವರು ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.ಧರಣಿ ಸತ್ಯಾಗ್ರಹದಲಿ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಲಾಯಿತು “ಪಂಜಿನ ಮೆರವಣಿಗೆ” “ಕತ್ತೆಗಳೊಡನೆ ಗಂಟು ಮೂಟೆಗಳ ಮೆರವಣಿಗೆ” “ಅರೆಬೆತ್ತಲೆಯಾಗಿ ಬಟ್ಟೆ ಒಗೆಯುವ ಮೂಲಕ” ವಿಧ ವಿಧ ಪ್ರತಿಭಟನೆಗಳ ಮೂಲಕ ಸರಕಾರಕ್ಕೆ ಫ್ರೋ!! ಅನ್ನಪೂರ್ಣಮ್ಮನವರ ವರದಿ ಶಿಫಾರಿಸಿಗೆ ಮಡಿವಾಳರ ಅಭಿವೃದ್ಧಿ ನಿಗಮ ಸ್ಥಾಪಿಸಲು ಹಾಗೂ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ಅಖಂಡ ಮಡಿವಾಳರೊಡನೆ ಎಚ್ ಎಸ್ ದೊರೆಸ್ವಾಮಿ ರವರು ಬಟ್ಟೆ ಒಗೆಯುವ ಮೂಲಕ ಸರಕಾರಕ್ಕೆ ಮಡಿವಾಳರೊಡನೆ ನಾನಿದ್ದೇನೆ ಎಂಬ ಸಂದೇಶ ಮತ್ತು ಮುಖ್ಯಮಂತ್ರಿಗಳಿಗೆ ನೇರವಾಗಿ ಪ್ರಶ್ನಿಸಿದ ಹಿರಿಯರು ಮಡಿವಾಳರಿಗೆ ಸಾಮಾಜಿಕ ನ್ಯಾಯ ಕೊಟ್ಟು ನಿಮ್ಮ ಸಮಾಜವಾದ ಮತ್ತು ನಿಮ್ಮ ಹಿಂದುಳಿದ ವರ್ಗದ ಹರಿಕಾರತ್ವವನ್ನು ನಿರೂಪಿಸಿ ಎಂದು ನೇರ ಸವಾಲೆಸೆದರು.ಶ್ರೀ ಎಚ್ ಎಸ್ ದೊರೆಸ್ವಾಮಿಗಳು ನಮ್ಮ ಹೋರಾಟ ಇಲ್ಲಿಗೆ ನಿಂತಿಲ್ಲ ಮುಖ್ಯಮಂತ್ರಿಗಳನ್ನು ಧರಣಿ ಸತ್ಯಾಗ್ರಹ ಪ್ರಮುಖರ ನಿಯೋಗದೊಂದಿಗೆ ಬೇಟಿ ಮಾಡಿಸಲಾಗುವುದು ಮತ್ತು ಪ್ರೆಬ್ರವರಿ 1ರವರೆಗೆ ಗಡುವು ನೀಡಲಾಗುವುದು. ನಂತರವು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರೆಬ್ರವರಿ 5ನೇ ತಾರೀಖಿನಿಂದ ಮಡಿವಾಳರ ಸಾಮಾಜಿಕ ನ್ಯಾಯಕ್ಕಾಗಿ ಎಚ್ ಎಸ್ ದೊರೆಸ್ವಾಮಿಗಳ ನೇತ್ರತ್ವದಲ್ಲಿ ಸರತಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು

ಅಖಿಲ ಭಾರತೀಯ ಮಡಿವಾಳ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಎಂಜೇರಪ್ಪನವರು ಗೌರವಾಧ್ಯಕ್ಷರಾದ ಮಲ್ಲೇಶ್ ರವರು ಮಂಡ್ಯ ಜಿಲ್ಲಾ ಕ್ಷೇಮಾಭಿವ್ರುದ್ದಿ ಸಂಘದ ಅಧ್ಯಕ್ಷರಾದ ಗುರುರಾಜ್ ರವರು ರಾಷ್ಟ್ರೀಯ ಯುವ ಕಾರ್ಯಾಧ್ಯಕ್ಷರು ಪ್ರಶಾಂತ್ ರವರು ಮತ್ತು ಚಂದ್ರು ವಸಂತಪುರ ರವರು ತುಮಕೂರು ಜಿಲ್ಲಾ ಅಧ್ಯಕ್ಷರಾದ ಶಾಂತಕುಮಾರ್ ರವರು ಮತ್ತು ಪಧಾದಿಕಾರಿಗಳು ಹುಣಸೂರು ತಾಲ್ಲೂಕು ಅಧ್ಯಕ್ಷರು ರವಿ ಚಿಲ್ಕುಂದ ರವರು ಮತ್ತು ಎಲ್ಲಾ ಪಧಾದಿಕಾರಿಗಳು ಶ್ರೀರಂಗಪಟ್ಟಣ ತಾಲ್ಲೂಕು ಅಧ್ಯಕ್ಷರು ಎಲ್ಲಾ ಪಧಾದಿಕಾರಿಗಳು ಕರ್ನಾಟಕ ರಾಜ್ಯ ಮಡಿವಾಳರ ಹೋರಾಟ ಸಮಿತಿ ಅಧ್ಯಕ್ಷರು ಬಸವರಾಜು ಎಚ್ ಡಿ ಕೋಟೆ ರವರು ಭಾಗವಹಿಸಿದರು

LEAVE A REPLY

Please enter your comment!
Please enter your name here