ಬೀದರ್/ಬಸವಕಲ್ಯಾಣ:ಶ್ರೀಯಲ್ಲಾಲಿಂಗಪ್ರಭುಗಳ 32ನೇ ಪುಣ್ಯಸ್ಮರಣೋತ್ಸವ ನಿಮಿತ್ತ ತಾಲ್ಲೂಕಿನ ಸಸ್ತಾಪೂರ ಗ್ರಾಮದ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಆಯೋಜಿಸಿದ ಬೀದರ ಜಿಲ್ಲಾ 6ನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಗ್ರಂಥಾಲಯ ರಾಜ್ಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಚಾಲನೆ ನೀಡಿದರು. ಪೂಜ್ಯ ಮಹಾದೇವಿ ತಾಯಿ, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಸಮ್ಮೇಳನಾಧ್ಯಕ್ಷೆ ವಜ್ರಾ ಪಾಟೀಲ, ಕಾಂಗ್ರೆಸ್ ಮುಖಂಡ ಶಿವಶರಣ ಬಿರಾದಾರ, ಹಿರಿಯ ಸಾಹಿತಿಗಳಾದ ಎಂ.ಜಿ. ದೇಶಪಾಂಡೆ, ಹಂಸಕವಿ, ಚನ್ನಮ್ಮ ವಲ್ಲೆಪೂರೆ, ಸಿದ್ರಾಮ ಗುದಗೆ, ಬಾಬುರೆಡ್ಡಿ ಚಾಮಾಲೆ, ನಾಗೇಂದ್ರ ಡೋಲೆ, ಡಾ. ಗವಿಸಿದ್ಧಪ್ಪ ಪಾಟೀಲ ಸೇರಿದಂತೆ ಪ್ರಮುಖರು ಭಾಗವಹಿಸಿದರು.