ಹಾಲಿ ಶಾಸಕರಿಗೆ ಟಿಕೇಟ್ ಖಚಿತ..!?

0
954

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಜೆಡಿಎಸ್ ಪಕ್ಷದಲ್ಲಿ ಹಾಲಿ ಶಾಸಕರಿಗೆ ಟಿಕೇಟ್ ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ತಿಂಗಳು 17 ನೇ ತಾರೀಖು ಬೆಂಗಳೂರಿನಲ್ಲಿ ನಡೆಯುವ 2018 ರ ಚುನಾವಣಾ ಅಭ್ಯಾರ್ಥಿಗಳ ಘೋಷಣೆ ಮತ್ತು ರಾಜ್ಯ ಮಟ್ಟದ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ನನ್ನ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಸುದ್ದಿಗೋಷ್ಠಿ ಯಲ್ಲಿ ಶಾಸಕ ಎಂ. ರಾಜಣ್ಣ ತಿಳಿಸಿದರು.

ತಾಲ್ಲೂಕು ಜೆಡಿಎಸ್ ಪಕ್ಷದ ಅದ್ಯಕ್ಷ ಧನಂಜಯರೆಡ್ಡಿ ಮಾತನಾಡಿ ಬೆಂಗಳೂರಿನಲ್ಲಿ ನಡೆಯುವ ಬೃಹತ್ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಸುಮಾರು 7000 ಜನರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರ ಸ್ವಾಮಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಕೊತ್ತನೂರು ಪಂಚಾಕ್ಷರರೆಡ್ಡಿ ಪಕ್ಷಕ್ಕೆ ಸೇರ್ಪಡೆ ಯಾದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅದ್ಯಕ್ಷ ಅಪ್ಸರ್ ಪಾಷ, ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಮಂಜುನಾಥ್, ಆನೇಮಡುಗು ಮುರಳಿ ಹಾಗೂ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here