ಹಾಲಿ ಶಾಸಕರು ಬೇಡ….ಮಾಜಿ ಶಾಸಕರೇ ಸಾಕು..!

0
180

ಚಿಕ್ಕಬಳ್ಳಾಪುರ / ಚಿಂತಾಮಣಿ:- ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ಬಣಕ್ಕೆ ಚಿಂತಾಮಣಿ ನಗರದ 26ನೇ ವಾರ್ಡಿನ ಜೆಡಿಎಸ್ ನಗರಸಭಾ ಸದಸ್ಯ ಜಬೀನ್ ತಾಜ್ ಮತ್ತು ಅವರ ಗಂಡ ಶೇಖ್ ಸರ್ದಾರ್ ಪಾಷ ರವರು ತಮ್ಮ ನಿವಾಸದಲ್ಲಿ ಬೆಂಬಲಿತ ರೊಂದಿಗೆ ಸೇರ್ಪಡೆಯಾದರು.

ನಮ್ಮ ವಾರ್ಡನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಮಾಡಿಕೊಟ್ಟಿಲ್ಲ ಮತ್ತು ನಮನ್ನ ಪಕ್ಷದಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ,ನಾವು ನಾಲ್ಕು ವರ್ಷದಿಂದ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿದ್ದೀವಿ ಇದು ವರೆಗೂ ನಾಲ್ಕು ವರ್ಷದಿಂದ ಹಾಲಿ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ನಮ್ಮ ವ್ಯಾಪ್ತಿಯಲ್ಲಿ ಕೇವಲ ಹತ್ತು ರೂಪಾಯಿಗಳ ಅಭಿವೃದ್ಧಿ ಕೆಲಸಗಳು ಮಾಡಿಲ್ಲ , ನಮ್ಮ ವಾರ್ಡನಲ್ಲಿ ಎಲ್ಲರೂ ಬಡವರು ಇದ್ದರೆ. ಇವರಿಗೆ ಯಾವುದೇ ತರಹದ ಮೈನಾರ್ಟಿ ಸ್ಕೀಮ್ ಸೌಲಭ್ಯಗಳು ಮಾಡಿ ಕೊಟ್ಟಿಲ್ಲ ಅದಕ್ಕಾಗಿ ನಾವು ಡಾ.ಎಂ ಸಿ ಸುಧಾಕರ್ ಬಣಕ್ಕೆ ಸೇರ್ಪಡೆಯಾಗಿದ್ದೇವೆ ಎಂದರು.

 

ಚಿಂತಾಮಣಿ ನಗರದ ಎನ್.ಎನ್.ಟಿ ಬಡಾವಣೆಯ 26 ನೇ ವಾರ್ಡಿನ ನಗರಸಭಾ ಸದಸ್ಯರಾದ ಜಬೀನ್ ತಾಜ್ ಗುರುವಾರ ಮಾಜಿ ಶಾಸಕ ಡಾ.ಎಂ.ಸಿ .ಸುಧಾಕರ್ ಬಣಕ್ಕೆ ಅವರ ಬೆಂಬಲಿಗ ರೊಂದಿಗೆ ಸೇರ್ಪಡೆಯಾಗಿದ್ದು ಆಡಳಿತರೂಡದಲ್ಲಿ ನಗರಸಭೆ ಸದಸ್ಯರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.

ಕಳೆದ ಒಂದು ತಿಂಗಳ ಹಿಂದಷ್ಟೇ ಜೆಡಿಎಸ್ ಪಕ್ಷದ ಹಿರಿಯ ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸ ರೆಡ್ಡಿ ಮಾಜಿ ಶಾಸಕರ ಬಣಕ್ಕೆ ಸೇರ್ಪಡೆಯಾಗಿದ್ದು ನಗರದ ವೆಂಕಟಗಿರಿಕೋಟೆ ಬಡಾವಣೆಯ 2 ನೇ ವಾರ್ಡಿನ ಮಾಜಿ ನಗರಸಭಾ ಅಧ್ಯಕ್ಷರು ಹಾಲಿ ನಗರಸಭೆ ಸದಸ್ಯರಾದ ಅನ್ವರ್ ರವರು ತಮ್ಮ ಬೆಂಬಲಿರೊಂದಿಗೆ ಶುಕ್ರವಾರ ಸೇರ್ಪಡೆಯಾಗುತ್ತಿದ್ದಾರೆ.

ಹಾಲಿ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷರಾಗಿರುವ ಜೆಡಿಎಸ್ ಪಕ್ಷದ ಸುಜಾತ ಶಿವಣ್ಣರ ಅಧಿಕಾರದ ಅವಧಿ ಪಕ್ಷದ ಮುಖಂಡರ ಒಳ ಒಪ್ಪಂದಂತೆ 2017 ನವಂಬರ್ ಗೆ ಮುಗಿದಿದ್ದೂ ರಾಜೀನಾಮೆಯನ್ನು ಸಲ್ಲಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಸುಜಾತ ಶಿವಣ್ಣರಿಗೆ ಸೂಚಿಸಿದರೂ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಮೀನ ಮೇಷ ಎಣಿಸುತ್ತಾ ಬಂದಿದ್ದರು.

ಅವರ ವಿರುದ್ಧ ಹಾಲಿ ಶಾಸಕರಾದ ಜೆ.ಕೆ ಕೃಷ್ಣಾ ರೆಡ್ಡಿ ಸಮರಸಾಗಿದ್ದು ಅವರನ್ನು ಅಧ್ಯಕ್ಷ ಸ್ಥಾನದಿಂದ ಯಾವ ರೀತಿ ಕೆಳಕ್ಕೆ ಇಳಿಸಬೇಕೆಂದು ವ್ಯೂಹ ರಚನೆ ಮಾಡಿರುವ ಬೆನ್ನಲ್ಲೇ ಅವರು ಸಹ ಶಾಸಕರ ಬಣಕ್ಕೆ ಮುಂದಿನ ವಾರ ಸೇರ್ಪಡೆಯಾಗಿಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಸ್ಪಷ್ಟ ಪಡಿಸಿದ್ದು ದಿನೇದಿನೇ ಹಾಲಿ ಶಾಸಕರ ಕಾರ್ಯವೈಖರಿಯಿಂದ ಬೇಸತ್ತಿರುವ ನಗರಸಭೆಯ ಮತ್ತು ಇತರೆ ಚುನಾಯಿತ ಪ್ರತಿನಿಧಿಗಳು ಅವರಿಂದ ದೂರವಾಗಿ ಮಾಜಿ ಶಾಸಕರ ಬಣಕ್ಕೆ ಸೇರ್ಪಡೆಯಾಗಲು ನಿಶ್ವಯಿಸಿದ್ದಾರೆ.

ಕಳೆದ 2013ರ ಮಾರ್ಚ್ ತಿಂಗಳಲ್ಲಿ ನಡೆದ ನಗರಸಭಾ ಚುನಾವಣೆಯಲ್ಲಿ ನಗರಸಭೆಯ 31ವಾರ್ಡಗಳಲ್ಲಿ ಜೆಡಿಎಸ್ 29 ಸ್ಥಾನಗಳಲ್ಲಿ ಸ್ವರ್ಧೆ ಮಾಡಿದ್ದು 16 ಸ್ಥಾನಗಳು ಗೆಲ್ಲುವ ಮೂಲಕ ನಗರಸಭೆಯ 60 ವರ್ಷಗಳ ಇತಿಹಾಸವನ್ನು ಬದಲಾವಣೆ ಮಾಡಿತ್ತು.

ಕಳೆದ 60 ವರ್ಷಗಳಿಂದ ನಗರಸಭೆಯನ್ನು ತಮ್ಮ ಕುಟುಂಬದ ಹಿಳಿದದಲ್ಲಿ ಇಟ್ಟು ಕೊಂಡಿದ್ದ ಮಾಜಿ ಶಾಸಕ ಡಾ ಎಂ.ಸಿ ಸುಧಾಕರ್ ಬೆಂಬಲಿಕರು ಕೇವಲ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

*ಏರಿದ ಮಾಜಿ ಶಾಸಕರ ಬೆಂಬಲಿತ ಸದಸ್ಯರ ಸಂಖ್ಯೆ* ಜೆಡಿಎಸ್ ಪಕ್ಷ ಮೊಟ್ಟಮೊದಲ ಬಾರಿಗೆ ನಗರಸಭಾ ಚುನಾವಣೆಯಲ್ಲಿ 16 ಸ್ಥಾನಗಳು ಗಳಿಸಿ 60 ವರ್ಷಗಳ ಕಾಲ ಮಾಜಿ ಶಾಸಕರ ಕುಟುಂಬದಲ್ಲಿದ ನಗರಸಭೆ ಆಡಳಿತವನ್ನು ಜೆಡಿಎಸ್ ತನ್ನತೆಕ್ಕೆಗೆ ಹಾಕಿ ಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಇಬ್ಬರು ಜೆಡಿಎಸ್ ನಗರಸಭಾ ಸದಸ್ಯರು ಮಾಜಿ ಶಾಸಕ ಬಣಕ್ಕೆ ಈಗಾಗಲೇ ಸೇರ್ಪಡೆಯಾಗಿದ್ದು ಶುಕ್ರವಾರ ಓರ್ವರು ಮತ್ತು ಮುಂದಿನ ವಾರ ಓರ್ವ ನಗರಸಭಾ ಸದಸ್ಯರು ಮಾಜಿ ಶಾಸಕರ ಬಣಕ್ಕೆ ಸೇರ್ಪಡೆಯಾಗುವುದರಿಂದ ಜೆಡಿಎಸ್ ನಗರಸಭೆ ಸದಸ್ಯರ ಸಂಖ್ಯೆ 12ಕ್ಕೆ ಕ್ಷೀಣಿಸಿದರೆ. ಮಾಜಿ ಶಾಸಕ ಬೆಂಬಲಿತ ನಗರಸಭಾ ಸದಸ್ಯರ ಸಂಖ್ಯೆ 17 ಕ್ಕೆ ಏರಲಿದೆ.ಹಾಲಿ ಜೆಡಿಎಸ್ ನಗರಸಭೆ ಆಡಳಿತವನ್ನು ನಡೆಸುತ್ತಿದ್ದು ಸದಸ್ಯರ ಸಂಖ್ಯೆ ಕ್ಷೀಣಗೊಂಡ ಹಿನ್ನೆಲೆಯಲ್ಲಿ ಅಧಿಕಾರ ಪೂರ್ಣಾವಧಿ ಮಾಡುವ ಮಾಡುವ ಮುನ್ನವೇ ಅಧಿಕಾರ ಕಳೆದುಕೊಂಡು ಮತ್ತೆ ಅಧಿಕಾರ ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ಬಣದ ವಶವಾಗುವ ದಿನಗಳು ಹತ್ತಿರ ಬರುತ್ತಿವೆ.

ಒಟ್ಟಾರೆ ಹೇಳಬೇಕೆಂದರೇ….ಜೆಡಿಎಸ್ ಪಕ್ಷದ ಹಾಲಿಶಾಸಕರ ವರ್ತನೆಗೆ ಬೇಸತ್ತು ಮಾಜಿ ಶಾಸಕರ ಆಶ್ರಯ ಬಯಸಿತ್ತಿರುವ ಪಕ್ಷದ ಕಾರ್ಯಕರ್ತರು ಮತಗತು ನಗರಸಭಾ ಸದಸ್ಯರು ಶಾಸಕರ ವಿರುದ್ಧ ದ್ವನಿ ಎತ್ತಿ ಪಕ್ಷದಲ್ಲಿ ದಿನೇ ದಿನೇ ಬಿರಿಕು ಉಂಟಾಗುತ್ತಿದ್ದರೂ ಜವಾಬ್ದಾರಿಯುತ ಪಕ್ಷದ ವರಿಷ್ಟರೇಕೆ ಮೌನ ಎಂಬ ಪ್ರಶ್ನೆ ಕ್ಷೇತ್ರದ ಜನ ಸಾಮಾನ್ಯರನ್ನು ಕಾಡತೊಡಗಿದೆ.

LEAVE A REPLY

Please enter your comment!
Please enter your name here