ದೋಬಿ ಘಾಟ್ ಉದ್ಘಾಟನಾ ಕಾರ್ಯಕ್ರಮ

0
162

ಬೆಂಗಳೂರು/ಕೆ.ಆರ್.ಪುರ: ಸಾಮಾಜಿಕ ಅಸಮಾನತೆಯಿಂದ ತುಳಿತಕ್ಕೊಳಗಾಗಿದ್ದ ಜನರನ್ನು ಮಡಿವಾಳ ಮಾಚಿದೇವ ದಿಟ್ಟ ನಿಲುವುಗಳಿಂದ ಸಬಲರನ್ನಾಗಿಸಲು ಶ್ರಮಿಸಿದ ಶ್ರೇಷ್ಠ ಶರಣರೆಂದು ಶಾಸಕ ಬೈರತಿ ಬಸವರಾಜ ಅಭಿಪ್ರಾಯಪಟ್ಟರು.

ಕ್ಷೇತ್ರದ ಸ್ವತಂತ್ರನಗರದಲ್ಲಿ ಶ್ರೀ ಮಾಚಿ ಮಡಿವಾಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಮಡಿವಾಳರ ಹಬ್ಬ ಮತ್ತು  ಡೋಬೀಘಾಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಸಮಾಜವನ್ನು ಕುಗ್ಗಿಸಿದ್ದ ಜಾತೀಯತೆ, ಮೇಲು ಕೀಳು ತಾರತಮ್ಯ, ಅಸ್ಪೃಷ್ಯತೆ ಮೂಢ ನಂಬಿಕೆ ಗಳು ಸಮಾಜದಲ್ಲಿನ ಮಹಿಳೆಯರು, ವೃತ್ತಿ ನಿರತ ಶ್ರಮ ಜೀವಿಗಳು ಬಡವರು ದೀನ ದಲಿತರು ನಿರಾಶೆಯ ಅಸಹನೀಯ ಬದುಕು ನಡೆಸುವಂತ ವಾತಾವರಣ ಸೃಷ್ಟಿಸಿತ್ತು, ಸಮಾಜದಲ್ಲಿ ಒಂದು ವರ್ಗ ಎದುರಿಸುತ್ತಿದ್ದ ಕೀಳರಿಮೆ, ಸಂಕಷ್ಟಗಳನ್ನು ತೊಲಗಿಸುವ ಧ್ಯೇಯ ಹೊಂದಿದ್ದ ಮಾಚಿದೇವರು ಸಾಮಾಜಿಕ ಕ್ರಾಂತಿ ಕೈಗೊಂಡು ಸಮಾಜವನ್ನು ಅಸಮಾನತೆಯಿಂದ ಮುಕ್ತಗೊಳಿಸಿ ಸಬಲ‌ ರಾಗಿಸಲು ಶ್ರಮಿಸಿದ್ದರು, ಅಗ್ರ ಶರಣರಲ್ಲಿ ಮೇರು ಸ್ಥಾನ ಪಡೆದವರಾದ ಅವರು, ಬಸವಣ್ಣನ ಅನುಯಾಯಿಗಳಾಗಿದ್ದು ಅನುಭವ ಮಂಟಪ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು, ಇಂದು ಮಡಿವಾಳ ಸಮುದಾಯ ಶುಭ ಕಾರ್ಯಗಳು ಜರುಗಬೇಕಿದ್ದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದೆ, ಮೈಲಿಗೆಯಾದ ಉಡುಪು ಗಳನ್ನು ಶುಚಿಗೊಳಿಸಿ ಸಮಾಜ ಸುಂದರವಾಗಿ ಕಾಣಲು ಶ್ರಮನಿರತರಾಗಿದ್ದಾರೆ, ಸಮುದಾಯದ ಏಳಿಗೆ ಅತ್ಯಗತ್ಯವಿದೆ, ಮಡಿವಾಳರ ಮಕ್ಕಳು ಶೈಕ್ಷಣಿಕ ಜ್ಞಾನಗಳಿಸಿ ಮುಖ್ಯ ವಾಹಿನಿಯಲ್ಲಿ ಪ್ರಮುಖರಾಗಬೇಕಿದೆ ಎಂದರು.
ಬಸವನಪುರ ಗ್ರಾಮದ 1 ಎಕರೆ 20 ಗುಂಟೆ ಪ್ರದೇಶದಲ್ಲಿ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಡೋಬೀಘಾಟ್ ಉದ್ಘಾಟಿಸಲಾಗಿದೆ, ಮುಂದಿನ ದಿನಗಳಲ್ಲಿ ಸಕರ್ಾರದಿಂದ 3 ಕೋಟಿ ಅನುದಾನ ಪಡೆದು ಮಡಿವಾಳ ಸಮಾಜದವರಿಗೆ ಮದುವೆ ಇನ್ನಿತರ ಕಾರ್ಯಗಳಿಗಾಗಿ ಸಮುದಾಯ ಭವನ ನಿಮರ್ಿಸಿಕೊಡಲಾಗುವುದೆಂದು ಭರವಸೆ ನೀಡಿದರು. ಬಿಬಿಎಂಪಿ ಕಛೇರಿ ಬಳಿಯಿಂದ ಸ್ವತಂತ್ರನಗರದವರೆಗೂ ಮಡಿವಾಳ ಮಾಚಿ ದೇವರ ಭಾವ ಚಿತ್ರವನ್ನು ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಕುಲಕಸಬು ಮಾಡುವ ಮಡಿವಾಳ ಸಾಮುದಾಯದವರಿಗೆ ವಿದ್ಯುತ್ ಚಾಲಿತ ಇಸ್ತ್ರಿಪೆಟ್ಟಿಗೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಚಿ ಮಡಿವಾಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎನ್.ಕೃಷ್ಣಪ್ಪ, ಪಾಲಿಕೆ ಸದಸ್ಯ ಜಯಪ್ರಕಾಶ್, ಆಂತೋಣಿ ಸ್ವಾಮಿ, ಕಲ್ಕೆರೆಕೃಷ್ಣಮೂರ್ತಿ, ಬಿ.ವಿ.ಮಂಜು ನಾಥ್, ಬಾಲಕೃಷ್ಣ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here