ಮನೆಮನೆಗೆ ಬಿಜೆಪಿ..

0
97

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಮುಖಂಡರಾದ ಶಿವಕುಮಾರ್ ಗೌಡ ರವರು ಶಿಡ್ಲಘಟ್ಟ ಕ್ಷೇತ್ರಕ್ಕೆ ಬರುವ ಬುರುಡುಗುಂಡೆ ಗ್ರಾಮ ಪಂಚಾಯತಿ ಏನಿಗದಲೆದಲ್ಲಿ ಇರುವ ಶ್ರೀವೀರಾಂನೇಯ ಸ್ವಾಮಿ ದೇವಸ್ಥಾನ ಕ್ಕೆ ತೆರಳಿ ನರೇಂದ್ರ ಮೋದಿ ಮಾಡಿರುವ ಕಾರ್ಯಕ್ರಮಗಳ ಪತ್ರಿಕೆಯನ್ನು ಇಟ್ಟು ಪೂಜೆ ಮಾಡಿಸಿದ್ದರು. ನಂತರ ಮಾತನಾಡಿದ ಬಿಜೆಪಿ ಮುಖಂಡರಾದ ಶಿವಕುಮಾರ್ ಗೌಡರು
ಕಳೆದ 60 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಆಡಳಿತಾವಧಿಯಲ್ಲಿ ಚಿಲಕಲನೇರ್ಪು ಹೋಬಳಿ ಅಭಿವೃದ್ದಿ ಶೂನ್ಯ. ಆದ್ದರಿಂದ ಈ ಬಾರಿ ಬಿಜೆಪಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿ ಎಂದು ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರ್ ಗೌಡ ಮನವಿ ಮಾಡಿದ್ದಾರೆ.

ತಾಲೂಕಿನ ಚಿಲಕಲನೇರ್ಪು ಹೋಬಳಿಯ ಚಿಲಕಲನೇರ್ಪು ಗ್ರಾಮದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಬಡವರ ಸರ್ಕಾರವೆಂದು ಬೊಗಳೆ ಬಿಡುತ್ತಿದೆ, ಆದರೆ ವಾಸ್ತವವಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಸ್ವಚ್ಛತೆ ಹಾಗೂ ನೀರಿನ ಸೌಲಭ್ಯಗಳಿಲ್ಲದೆ ವಂಚನೆಗೊಳಗಾಗಿ ಜನರು ಪರದಾಡುವಂತಾಗಿದೆ ಎಂದರು.

ದೇಶದಲ್ಲಿ ನಮ್ಮ ಪ್ರಧಾನ ಮಂತ್ರಿಗಳು ಜನಪರ ಯೋಜನೆಗಳನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಹೀಗಾಗಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲುವಂತೆ ಮಾಡಿದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.

ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡುತ್ತಾ, ಕಳೆದ ಬಾರಿ ಜೆಡಿಎಸ್ ಪಕ್ಷದ ನಾಯಕ ರಾಜಣ್ಣ ಅವರು ಗೆಲ್ಲಲು ಕ್ಷೇತ್ರದಾಧ್ಯಂತ ನಾಟಕಗಳನ್ನು ಮಾಡಿಕೊಂಡು ಗಡ್ಡ ಬಿಟ್ಟು ಜನರನ್ನು ಮರಳು ಮಾಡಿ ಶಾಸಕರಾದರು. ಆದರೆ ಬಳಿಕ ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಇತ್ತ ತಲೆ ಹಾಕುವುದನ್ನೇ ಬಿಟ್ಟಿದ್ದಾರೆಂದು ರಾಜಣ್ಣ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ತಾಲ್ಲೂಕು ಅಧ್ಯಕ್ಷರಾದ ನಂದೀಶ್, ರವಿಚಂದ್ರ, ಸುಶೀಲಮ್ಮ, ರತ್ನಮ್ಮ, ಶಿವಮ್ಮ, ಪಾರಿಜಾತ, ನಾಗೇಶ್, ಮುನಿರಾಜು, ಮಂಜುನಾಥ್, ಚಿಲಕಲನೇರ್ಪು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀರಾಮರೆಡ್ಡಿ, ಶ್ರೀನಿವಾಸ್, ರಾಜಣ್ಣ, ಬೈರೆಗೌಡ, ಸಂದೀಪ್, ನರಸಿಂಹ, ಸಂಪತ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here